ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಜಿಲ್ಲೆಯಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ತಾಲೂಕು ಚಳ್ಳಕೆರೆ ಎಂಬ ಕೀರ್ತಿಗೆ ಪಾತ್ರವಾಗಿದ್ದು, ನಗರ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿದೆ.
ಚಿತ್ರದುರ್ಗ ಜಿಲ್ಲೆಯ ಅತಿ ದೊಡ್ಡ ತಾಲೂಕು ಚಳ್ಳಕೆರೆ. ಇಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚು. ಒಂದಾನೊಂದು ಕಾಲದಲ್ಲಿ ಎಣ್ಣೆ ಮಿಲ್ಲುಗಳನ್ನೂ ಹೊಂದಿ ಎರಡನೆಯ ಬಾಂಬೆಯಾಗಿ ಹೆಸರುವಾಸಿಯಾಗಿತ್ತು. ಕಾಲಕ್ರಮೇಣ ಎಣ್ಣೆ ಮಿಲ್’ಗಳು ನಿಂತೇ ಹೋಗಿವೆ.
ತಾಲೂಕಿನ ಕುದಾಪುರದಲ್ಲಿ ಹಾಗೂ ದೊಡ್ಡ ಉಳ್ಳಾರ್ತಿ ಕಾವಲ್’ನಲ್ಲಿ ಇತ್ತೀಚೆಗಷ್ಟೇ ಭಾರತ ಸರ್ಕಾರದ ರಕ್ಷಣಾ ಇಲಾಖೆ ಐದು ಸಂಸ್ಥೆಗಳ ಕಾರ್ಯ ಚಟುವಟಿಕೆ ಪ್ರಾರಂಭಿಸಿದ್ದು, ಇದು ದೇಶದ ಭೂಪಟದಲ್ಲಿ ತಾಲೂಕು ಗುರುತಿಸಿಕೊಂಡು ವಿಜ್ಞಾನ ನಗರವಾಗಿ ಮಾರ್ಪಟ್ಟಿದೆ.
ಬೆಳೆಯುತ್ತಿರುವ ನಗರಕ್ಕೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಪೋಲಿಸ್ ಠಾಣೆಯು ಸಹ ಅಭಿವೃದ್ಧಿ ಹೊಂದಬೇಕಾಗುತ್ತದೆ. ಅದರಂತೆ ಚಳ್ಳಕೆರೆ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಯರಿಸಿದ್ದು ನೂತನವಾಗಿ ನಗರ ಪೊಲೀಸ್ ಠಾಣೆಗೆ ಇಬ್ಬರು ಪಿಎಸ್’ಐಗಳು ಇದ್ದು ಮೇಲ್ದರ್ಜೆಗೆರಿದ ನಂತರ ಒಬ್ಬರು ಇನ್ಸ್’ಪೆಕ್ಟರ್, ನಾಲ್ಕು ಮಂದಿ ಪೋಲೀಸ್ ಸಬ್ ಇನ್ಸ್’ಪೆಕ್ಟರ್‌ಗಳು ಕಾರ್ಯನಿರ್ವಹಿಸಲಿದ್ದಾರೆ.
ಮೇಲ್ದರ್ಜೆಗೇರಿದ ಪೋಲಿಸ್ ಠಾಣೆಗೆ ದಾವಣಗೆರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೆ.ಎಸ್. ತಿಪ್ಪೇಸ್ವಾಮಿ ಅವರನ್ನು ನೇಮಕ ಮಾಡಿದ್ದು, ಅವರು ಈಗಾಗಲೇ ಅಧಿಕಾರ ಸ್ವೀಕರಿಸಿದ್ದಾರೆ.
ಚಳ್ಳಕೆರೆ ವೃತ್ತ ನಿರೀಕ್ಷಕರಾದ ನೆಲವಾಗಲು ಮಂಜುನಾಥ್, ಪಿಎಸ್’ಐಗಳಾದ ರಾಘವೇಂದ್ರ, ಮಂಜುನಾಥ, ಅರ್ಜನ್ ಲಿಂಗಾರೆಡ್ಡಿ ಹಾಗೂ ಸಿಬ್ಬಂದಿಗಳು ತಿಪ್ಪೇಸ್ವಾಮಿ ಅವರನ್ನು ಸ್ವಾಗತಿಸಿ, ಅಭಿನಂದಿಸಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post