ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ನಗರದಲ್ಲಿ ನಡೆಯುವ ಅ.22ರಂದು ಒಳ ಮೀಸಲಾತಿ ಪ್ರತಿಭಟನೆ ಯಾವುದೇ ಅಹಿತಕರ ಘಟನೆಗೆ ಅಸ್ಪದಕ್ಕೆ ಎಡೆಮಾಡಿಕೊಡುವಂತೆ ಇರಬಾರದು. ಪೊಲೀಸ್ ನಿಯಮಗಳನ್ನು ಪಾಲಿಸುತ್ತಾ ಹೆಚ್ಚು ಜನ ಸೇರಿಸದೆ ಕೋವಿಡ್19 ಮಾರ್ಗಸೂಚಿಗಳನ್ನು ಖಡ್ಡಾಯವಾಗಿ ಪಾಲಿಸಬೇಕು ಎಂದು ಡಿವೈಎಸ್‌ಪಿ ಕೆ.ವಿ. ಶ್ರೀಧರ್ ಹೇಳಿದರು.
ನಗರದ ಡಿವೈಎಸ್‌ಪಿ ಕಚೇರಿ ಆವರಣದಲ್ಲಿ ಸೋಮವಾರ ಪೊಲೀಸ್ ಇಲಾಖೆ ವತಿಯಿಂದ ದಲಿತ ಮುಖಂಡರಿಗೆ ಹಾಗೂ ಮುಸ್ಲಿಂ ಸಮುದಾಯವರಿಗೆ ಆಯೋಜಿಸಿದ್ದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಾಗೂ ಒಳಮೀಸಲಾತಿ ಪ್ರತಿಭಟನೆಗೆ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿಮ್ಮ ಮಗು ಬುದ್ದಿಶಾಲಿಯಾಗಿ ಹುಟ್ಟಬೇಕೆ? ಸದೃಢ ಮೈಕಟ್ಟು ಹೊಂದಿ ಕಾಂತಿಯುತವಾಗಬೇಕೆ? ಇಲ್ಲಿದೆ ಮಾರ್ಗ
ಈದ್ ಮಿಲಾದ್ ಹಬ್ಬವನ್ನು ಎಲ್ಲಾ ಸಮಾಜದ ಬಾಂಧವರು ಶಾಂತಿ ಸೌಹಾರ್ದ, ಸಡಗರದಿಂದ ಆಚರಿಸುವಂತೆ ಮಹಮ್ಮದ್ ಪೈಗಂಬರ್ ಎಲ್ಲಾ ಸಮುದಾಯಗಳ ಏಳಿಗೆಗಾಗಿ 14ನೆಯ ಶತಮಾನದಲ್ಲಿ ಶಾಂತಿ ನೆಮ್ಮದಿಯಿಂದ ಬಾಳಲು ಶ್ರಮಿಸಿದವರಾಗಿದ್ದಾರೆ. ಆದ್ದರಿಂದ ಹಬ್ಬದ ಆಚರಣೆ ವೇಳೆ ಪಾವಿತ್ರತೆ ಕಾಪಾಡಿಕೊಳ್ಳಬೇಕು ಎಂದರು.
ವೃತ್ತ ನಿರೀಕ್ಷ ಮಂಜುನಾಥ್ ನಲವಾಗಲು ಮಾತನಾಡಿ, ಒಳ ಮೀಸಲಾತಿಗೆ ನಗರದಲ್ಲಿ ನಡೆಸುವ ಪ್ರತಿಭಟನೆ ಯಾವುದೇ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡುವಂತಿರಬಾರದು ನಿಮ್ಮ ಬೇಡಿಕೆ ಸರಕಾರದ ಮೂಲಕ ಈಡೇರಿಸಿಕೊಳ್ಳಿ, ಶಾಂತಿಯುತವಾಗಿ ರಸ್ತೆಗೆ ಹೆಚ್ಚು ಜನ ಸೇರಿಸದೆ ಗುಂಪುಗಳು ಸೇರಿಸದೆೆ ಕೊವಿಡ್ ಮಾರ್ಗಸೂಚಿ ಪಾಲಿಸಿ ಎಂದರು.
ಪಿಎಸ್‌ಐ ಮಂಜುನಾಥ್ ಅರ್ಜುನ್ ಲಿಂಗಾರೆಡ್ಡಿ ಮಾತನಾಡಿ, ಹಬ್ಬದ ಮುಸ್ಲಿಂ ಬಾಂದವರು ಹಬ್ಬದ ಹೆಸರಿನಲ್ಲಿ ಯುವಕರು ರಾತ್ರಿವೇಳೆ ರಸ್ತೆಯಲ್ಲಿ ಓಡಾಡಬಾರದು ಎಂದು ತಿಳಿಸಬೇಕು. ಯಾವುದೇ ಪ್ಲೆಕ್ಸ್, ಬ್ಯಾನರ್ ಕಟ್ಟುವಾಗ ನಗರಸಭೆ ವತಿಯಿಂದ ಪರವಾನಿಗೆ ಪಡೆಯಬೇಕು. ಹಬ್ಬ ಮುಗಿದ ತಕ್ಷಣ ಅವುಗಳನ್ನು ತೆರವುಗೊಳಿಸಬೇಕು ಹಬ್ಬದ ಮೆರವಣಿಗೆ ಸಂದಂರ್ಭದಲ್ಲಿ ಸೂಕ್ತ ಬಂದ್‌ಬಸ್ತ್ ವ್ಯವಸ್ಥೆಯನ್ನು ಇಲಾಖೆಯಿಂದ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಕೆ. ವೀರಭದ್ರಪ್ಪ, ದಲಿತ ಮುಖಂಡ ವಿಜಯ್ ಕುಮಾರ್, ಭೀಮನಕೆರೆ ಶಿವಮೂರ್ತಿ, ವೆಂಕಟೇಶ್, ನಿಂಗಣ್ಣ, ಹಳೇನಗರ ಭದ್ರಪ್ಪ, ತಿಪ್ಪೇಸ್ವಾಮಿ, ಮುಸ್ಲಿಂ ಸಮುದಾಯದ ಮುಖಂಡರು ಇತರರಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post