ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಸಾಮಾನ್ಯವಾಗಿ ಹೊಸ ವರ್ಷಾಚರಣೆ ಎಂದರೆ ಮೋಜು ಮಸ್ತಿಯದ್ದೇ ಕಾರುಬಾರು. ಆದರೆ, ಇಲ್ಲಿನ ಸಾರ್ವಜನಿಕರು ಈ ಬಾರಿಯ ಹೊಸ ವರ್ಷವನ್ನು ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಬರಮಾಡಿಕೊಂಡಿದ್ದಾರೆ.ಸಮಾಜಕ್ಕಾಗಿ ತಮ್ಮ ಸುಖ ಸಂತೋಷವನ್ನು ತ್ಯಾಗ ಮಾಡಿ ಹಗಲಿರುಳು ದುಡಿಯುವ ಪೊಲೀಸ್ ಸಿಬ್ಬಂದಿಗಳನ್ನು ಸನ್ಮಾನಿಸುವ ಮೂಲಕ ಚಳ್ಳಕೆರೆ ಸಾರ್ವಜನಿಕರು ನೂತನ ವರ್ಷಾಚರಣೆಯನ್ನು ಸಂಭ್ರಮಿಸಿದ್ದಾರೆ.
ಹಬ್ಬ-ಹರಿದಿನ, ಸಭೆ ಸಮಾರಂಭ, ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ತಮ್ಮ ಕೆಲಸದ ಸಮಯಕ್ಕೆ ಹಾಜರಾಗಿ ಹಗಲು, ಬಿಸಿಲು, ಗಾಳಿ, ಮಳೆ ಎನ್ನದೇ ತನ್ನ ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸುವ ಆರಕ್ಷಕರಿಗೆ ಸಾರ್ವಜನಿಕರು ಹೂಮಾಲೆ ಹಾಕಿ, ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಈ ಸಮಯದಲ್ಲಿ ಮುಖ್ಯಪೇದೆ ತಿಪ್ಪೇಸ್ವಾಮಿ, ಮಂಜಣ್ಣ, ಪೇದೆಗಳಾದ ಮಚ್ಚೇಂದ್ರಪ್ಪ, ವಸಂತ ಕುಮಾರ್, ತಿಪ್ಪೇಸ್ವಾಮಿ, ರಂಗಸ್ವಾಮಿ, ಅಶೋಕ ರೆಡ್ಡಿ, ಸಂತೋಷ್, ಕೆ. ಶಂಕರಮೂರ್ತಿ, ಗೃಹ ರಕ್ಷಕರು, ನಜೀರ್, ಪವನ್, ಸಾರ್ವಜನಿಕ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post