ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಲ್ಲಿ ಕೋವಿಡ್-19ಕಾರಣದಿಂದ ಮುಚ್ಚಲ್ಲಟ್ಟಿದ್ದ ಶಾಲಾ ಕಾಲೇಜುಗಳು ರಾಜ್ಯ ಸರ್ಕಾರದ ಆದೇಶದ ಮೆರೆಗೆ ಶುಕ್ರವಾರ ಪುನರಾರಂಭಗೊಂಡವು.
ಹೊಸ ವರ್ಷದ ಮೊದಲ ದಿನ ಹಾಗೂ ಶಾಲಾಕಾಲೇಜುಗಳು ಪುನರಾರಂಭಗೊಂಡ ಕಾರಣ ಶಾಲೆಯ ಪ್ರವೇಶದ್ವಾರದ ಬಳಿ ರಂಗವಲ್ಲಿ ಬಿಡಿಸಿ, ತಳಿರು ತೋರಣ, ಬಾಳೆ ಕಂದು ಮತ್ತು ಹೂವಿನ ತೋರಣವನ್ನು ಕಟ್ಟಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಗಿತ್ತು.ಪ್ರವೇಶದ್ವಾರದ ಬಳಿ ವಿದ್ಯರ್ಥಿಗಳ ಹೆಸರನ್ನು ನಮೂದಿಸಿಕೊಂಡು ಅವರು ಪೋಷಕರಿಂದ ತಂದಂತಹ ಅನುಮತಿ ಪತ್ರವನ್ನು ಪಡೆದು. ಸ್ಕ್ರೀನ್ ಟೆಸ್ಟ್ ಮಾಡಿ, ಕೈಗೆ ಸ್ಯಾನಿಟೈಸರ್ ಹಾಕಿ, ಮಾಸ್ಕ್ ಧರಿಸಿದ ವಿದ್ಯಾರ್ಥಿಗಳನ್ನು ಶಾಲೆಯ ತರಗತಿ ಒಳಗೆ ಪ್ರವೇಶ ನೀಡಲಾಯಿತು.ಬಹುತೇಕ ಎಲ್ಲಾ ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅತ್ಯಂತ ಕಡಿಮೆಯಿದ್ದದ್ದು ಕಂಡುಬಂದಿತು. ಹಳೇನಗರದ ಸರ್ಕಾರಿ ಪ್ರಾಥಮಿಕ ಉನ್ನತ ಬಾಲಕ, ಬಾಲಕಿಯರ ಶಾಲೆಯ ಜಗುಲಿಯ ಮೇಲೆ ವಿದ್ಯಾರ್ಥಿಗಳನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ರೀತಿ ಕುಳ್ಳಿರಿಸಿ, ವಿದ್ಯಾಗಮ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠವನ್ನು ಬೋಧಿಸುತ್ತಿದ್ದದ್ದು ಕಂಡುಬಂದಿತು.
ಈ ಕುರಿತು ಮಾತನಾಡಿದ ಶಿಕ್ಷಕಿಯರು, ಹೊಸವರ್ಷದ ಮೊದಲ ದಿನವಾದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದು ಬಹುಷಃ ಸೋಮವಾರದಿಂದ ಹೆಚ್ಚಿನ ವಿದ್ಯಾರ್ಥಿಗಳನ್ನು ಪೋಷಕರು ಶಾಲೆಗೆ ಕಳುಹಿಸುವ ನಿರೀಕ್ಷೆಯಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಸಂಚಿಹೊನ್ನಮ್ಮ ಬಾಲಕಿಯರ ಪದವಿಪೂರ್ವ ಕಾಲೇಜು
ಸಂಚಿ ಹೊನ್ನಮ್ಮ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಹಾಜರಿದ್ದದ್ದು ಕಂಡುಬಂದಿತು.
ಈ ಕುರಿತಂತೆ ಮಾತನಾಡಿದ ಪ್ರಾಂಶುಪಾಲ ಡಾ.ಸಿದ್ದಲಿಂಗಸ್ವಾಮಿ, ವಾಣಿಜ್ಯ, ವಿಜ್ಞಾನ, ಕಲಾ ವಿಭಾಗದ ಒಟ್ಟು ವಿದ್ಯರ್ಥಿನಿಯರ ಸಂಖ್ಯೆ 288 ಯಿದ್ದು ಇಂದು ಕೇವಲ 60 ವಿದ್ಯಾರ್ಥಿನಿಯರು ಕಾಲೇಜಿಗೆ ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದರು.ಬ್ಯಾರಿಕೇಡ್ ತೆರವುಗೊಳಿಸದ ಚುನಾವಣಾ ಇಲಾಖೆ
ಸಂಚಿ ಹೊನ್ನಮ್ಮ ಬಾಲಕಿಯರ ಪ್ರೌಢಶಾಲೆಯನ್ನು ಗ್ರಾಪಂ ಚುನಾವಣೆಗೆ ನಿಯೋಜಿತರಾಗಿದ್ದ ಸಿಬ್ಬಂದಿಗಳಿಗೆ ತರಬೇತಿ ಹಾಗೂ ಗ್ರಾಪಂ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಆದರೆ ಮತ ಎಣಿಕೆ ಮುಗಿದ ನಂತರವೂ ಸಹ ಸದರಿ ಶಾಲಾ ಕೊಠಡಿಗಳಲ್ಲಿ ಅಳವಡಿಸಿದ್ದ ತಂತಿ ಬಲೆ ಮುಂತಾದ ಪರಿಕರಗಳನ್ನು ಚುನವಣಾ ಇಲಾಖೆ ಸಿಬ್ಬಂದಿಗಳು ತೆಗೆಯದೇ ಹಾಗೆಯೆ ಬಿಟ್ಟಿದ್ದ ಕಾರಣ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪ್ರವೇಶ ಲಭಿಸದೆ ಹಿಂದಿರುಗಿದರು.
ನಗರದ ಬಹುತೇಕ ಶಾಲಾ ಕಾಲೆಜಿನಲ್ಲಿ ವಿದ್ಯಾರ್ಥಿಗಳ ಹಾಜರಾತಿ ಅತಿ ವಿರಳವಾಗಿದ್ದು ಕಂಡು ಬಂದಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post