ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲ್ಲೂಕು ಚಂದ್ರಗುತ್ತಿ ಹೋಬಳಿ ಕುಂಟಗಳಲೆ ಅರಣ್ಯದಲ್ಲಿ ಸುಮಾರು 10 ವರ್ಷ ಪ್ರಾಯದ ಚಿರತೆಯೊಂದು #Leopard ಅಸು ನೀಗಿದೆ.
ಬಹುಷಃ ವಿದ್ಯುತ್ ಹರಿಸಿ ಕೊಲ್ಲಲಾಗಿದೆ ಎಂದು ಕೇಳಿ ಬರುತ್ತಿದ್ದು ಅರಣ್ಯ ಇಲಾಖೆಯವರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.
Also Read>> ಬಾಯಿ ತೆರೆಯಲಾಗದೆ 14 ತಿಂಗಳು ಹೋರಾಟ | ಶಸ್ತ್ರಚಿಕಿತ್ಸೆಯಿಂದ ಶಿವಮೊಗ್ಗ ಮಹಿಳೆಗೆ ಹೊಸ ಜೀವನ
ಈ ಭಾಗದಲ್ಲಿ ಈ ಹಿಂದೆ ಕಾಡುಕೋಣಗಳ, ಕಡವೆ, ಜಿಂಕೆಗಳ ಸಾವು ಕಾಣಿಸಿದ್ದು ಎಲ್ಲವನ್ನೂ ವಿದ್ಯುತ್ ಹರಿಸಿ ಕೊಲ್ಲಲಾಗಿದೆ ಎಂದು ಸ್ಥಳೀಯರು ಅನುಮಾನಿಸಿದ್ದಾರೆ.
ಕಾಡು ಪ್ರಾಣಿಗಳನ್ನು ಕೊಂದು ಮಾರುವ ಜಾಲವೊಂದು ಈ ಭಾಗದಲ್ಲಿದ್ದು ಪ್ರಭಾವಿಗಳಿಂದಾಗಿ ಬೆಳಕಿಗೆ ಬರುತ್ತಿಲ್ಲ. ಅರಣ್ಯ ಇಲಾಖೆಯವರಿಗೆ ತಿಳಿದಿದ್ದರೂ ಹತಾಶೆಯಿಂದ ಕೈಚೆಲ್ಲಿಕುಳಿತಿದ್ದಾರೆಯೆ, ಪ್ರಾಣಿ ಹತ್ಯೆಗೆ ಕಡಿವಾಣ ಇಲ್ಲವೇ ಎಂಬ ಆತಂಕ ಸ್ಥಳೀಯರದ್ದಾಗಿದೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















