ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ಮದುವೆಯಾಗುವ ಹುಡುಗಿಯನ್ನೆ ತಪ್ಪಿಸಿದರು ಎನ್ನುವ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಇನ್ನೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗದ ಬಡಾ ಮಕಾನ್ ಬಳಿ ನಡೆದಿದೆ.
ಚಿತ್ರದುರ್ಗ ನಗರದ ಬಡಾ ಮಕಾನ್ ನಿವಾಸಿ ಫಾರ್ಹಾನ ಬಾನು (45) ಕೊಲೆಯಾಗಿರುವ ಮಹಿಳೆ. ಕೊಲೆ ಮಾಡಿರುವ ಆರೋಪಿ ಇಮ್ತಿಯಾಜ್ ಹೊಸದುರ್ಗದ ಯವತಿಯನ್ನು ಮದುವೆಯಾಗುವುದು ಎಂದು ಗೊತ್ತಾಗಿತ್ತು. ಆದರೆ ಕಾರಣಾಂತರಗಳಿಂದ ಮದುವೆಯು ಆ ಯುವತಿ ಜೊತೆ ತಪ್ಪಿಹೋಗಿದ್ದು, ಇದಕ್ಕೆ ಫರ್ನಾ ಭಾನು ಕಾರಣ ಎಂದು ಇಮ್ತಿಯಾಜ್ ಆಕೆಯನ್ನು ಚಾಕವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿ ಇಮ್ತುಯಾಜ್ ನನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಿತ್ರದುರ್ಗ)








Discussion about this post