ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ಸಪ್ಲೈ ಬಿಲ್ಲು ನೀಡಲು ರೈತನಿಂದ 10 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟ ರೇಷ್ಮೆ ಇಲಾಖೆ ಪ್ರದರ್ಶಕ ಅಧಿಕಾರಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದ ರೈತ ಸಂತೋಷಕುಮಾರ್ ಎಂಬುವರಿಗೆ ರೇಷ್ಮೆ ಇಲಾಖೆ ಅಧಿಕಾರಿ ಶಿವಕುಮಾರ್ 10 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಅಧಿಕಾರಿ ಲಂಚಗೂಳಿತನದಿಂದ ಬೇಸರಗೊಂಡ ರೈತ ಸಂತೋಷ ಕುಮಾರ್ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಬಳಿಕ ರೈತನ ಬಳಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ರೈತನ ದೂರು ಆಧರಿಸಿ ಎಸಿಬಿ ಜಯಕುಮಾರ್ ಮಾರ್ಗದರ್ಶನದಲ್ಲಿ, ಎಸಿಬಿ ಡಿವೈಎಸ್‌ಪಿ ಬಸವರಾಜ್ ಮುದುಗಮ್ ನೇತೃತ್ವದ ತಂಡ ರೇಷ್ಮೆ ಇಲಾಖೆಯ ಅಧಿಕಾರಿ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ಟ್ರ್ಯಾಪ್ ಮಾಡಿದ್ದಾರೆ. ಒಂದು ಗಂಟೆಯಿಂದ ಎಸಿಬಿ ಅಧಿಕಾರಿಗಳು ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ದಾಳಿವೇಳೆ ಎಸಿಬಿ ಪಿಎಸ್‌ಐಗಳಾದ ಪ್ರವೀಣಕುಮಾರ್, ಎಸ್.ಡಿ. ಆಂಜನೇಯ, ಸಿಬ್ಬಂದಿಗಳು ಇದ್ದರು
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post