ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ದಿವಂಗತ ಎಚ್.ವಿ. ರಂಗಸ್ವಾಮಿ ಅವರ ಜ್ಞಾಪಕಾರ್ಥವಾಗಿ ರಾಷ್ಟ್ರಮಟ್ಟದದ ಮುಕ್ತ ಆಹ್ವಾನಿತ ಕೇರಂ ಪಂದ್ಯಾವಳಿ-2021ನ್ನು ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಏಪ್ರಿಲ್ ೨ರಿಂದ ೪ರವರೆಗೂ ಆಯೋಜಿಸಲಾಗಿದೆ ಎಂದು ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ತಿಳಿಸಿದರು.
ಸುದ್ದಿಗೋಷ್ಟಿನ್ನುದೇಶಿಸಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕೇರಂ ಫ್ರೆಂಡ್ಸ್ ಗ್ರೂಪ್ ಹಾಗೂ ಭಾರತ್ ಕೇರಂ ಅಕಾಡೆಮಿ ಇವರ ಸಂಯುಕ್ತಾಶ್ರಯದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದರು.
ಕೇರಂ ವಿಶ್ವಕಪ್ ವಿಜೇತ ಆರ್.ಎಂ. ಶಂಕರ್ ಈ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳಲಿದ್ದು, ಇವರ ಜೊತೆಗೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಕರ್ನಾಟಕ, ದೆಹಲಿ ಹಾಗೂ ಇತರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ರ್‍ಯಾಂಕಿಂಗ್ ಹೊಂದಿರುವ ಆಟಗಾರರು ಭಾಗವಹಿಸಲಿದ್ದಾರೆ ಎಂದರು.
ಮೊದಲನೆಯ ಬಹುಮಾನ 50 ಸಾವಿರ ರೂ., ಎರಡನೆಯ ಬಹುಮಾನ 30 ಸಾವಿರ ರೂ. ಹಾಗೂ ತೃತೀಯ ಬಹುಮಾನವಾಗಿ 20 ಸಾವಿರ ರೂ. ನಗದು ನೀಡಲಾಗುತ್ತದೆ. 350 ಜನ ಭಾಗವಹಿಸಬಹುದಾಗಿದ್ದು, 36 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ರೆಫರೀಸ್‌ಗಳನ್ನು ನೇಮಿಸಲಾಗಿದ್ದು, ತಂಡದಲ್ಲಿ 5 ಜನರು ನೋಂದಾಯಿಸಬೇಕು. ಒಂದು ತಂಡದಲ್ಲಿ 4 ಜನ ಭಾಗವಹಿಸಬಹುದು ಎಂದರು.
ಹೆಚ್ಚಿನ ಮಾಹಿತಿಗಾಗಿ ಮೊ:776009769, ಮೊ:9845421196, ಮೊ:7676317501, ಮೊ:9738275403 ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post