ಕಲ್ಪ ಮೀಡಿಯಾ ಹೌಸ್ | ಚಿತ್ರಾಪುರ |
ವಿಶ್ವಮಟ್ಟದಲ್ಲಿ ಫ್ಯಾನ್ ಬೇಸ್ ಹೊಂದಿದ್ದರೂ ತಮ್ಮ ಸಿಂಪ್ಲಿಸಿಟಿಯಿಂದಲೇ ಅಭಿಮಾನಿಗಳ ಮನದಲ್ಲಿ ಮನೆ ಮಾಡಿರುವ ರಾಕಿಂಗ್ ಸ್ಟಾರ್ ಯಶ್ Rocking Star Yash ಈಗ ಮತ್ತೊಮ್ಮೆ ಎಲ್ಲರ ಹೃದಯ ಗೆದ್ದಿದ್ದಾರೆ.
ಶಿರಾಲಿಯ ಚಿತ್ರಾಪುರಕ್ಕೆ ಭೇಟಿ ನೀಡಿರುವ ಯಶ್ ದಂಪತಿ ಶ್ರೀಮಠಕ್ಕೆ ತೆರಳಿ ದೇವರ ದರ್ಶನ ಪಡೆದರು.

ಇದಕ್ಕೂ ಮುನ್ನ ಚಿತ್ರಾಪುರ ಮಠಕ್ಕೆ ತೆರಳಿದ ಯಶ್ ದಂಪತಿ ದೇವರ ದರ್ಶನ ಪಡೆದರು. ಆನಂತರ ಸ್ವಾಮಿಗಳನ್ನು ಭೇಟಿಯಾಗಿ ಸುಮಾರು 2 ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.

ಯಶ್ ದಂಪತಿ ಆಗಮಿಸಿರುವ ಸುದ್ದಿ ತಿಳಿದು ಅಭಿಮಾನಿಗಳ ದಂಡೇ ಮಠದ ಬೀದಿಯಲ್ಲಿ ನೆರೆದಿತ್ತು. ಇದರಲ್ಲೂ ಸರಳತೆ ಮೆರೆದ ಯಶ್ ದಂಪತಿ ತಾಳ್ಮೆಯಿಂದ ಅಭಿಮಾನಿಗಳಿಗೆ ಆಟೋಗ್ರಾಫ್ ಹಾಗೂ ಫೋಟೋ ಗ್ರಾಫ್’ಗೆ ಫೋಸ್ ನೀಡಿದರು.
ಯಶ್ ಭೇಟಿ ಹಿನ್ನೆಲೆಯಲ್ಲಿ ಶ್ರೀಮಠದ ಬೀದಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post