ಕಲ್ಪ ಮೀಡಿಯಾ ಹೌಸ್ | ಇಂದೋರ್ |
ಆನ್ಲೈನ್ ಆಟಗಳ ಗೀಳನ್ನು ಹೊಂದಿದ್ದ 15 ವರ್ಷದ ಬಾಲಕ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ತನ್ನ ಮನೆಯಿಂದ ತನ್ನ ತಾಯಿಯ ಮೊಬೈಲ್ ಫೋನ್ನೊಂದಿಗೆ ಓಡಿಹೋಗಿ ಇಂದೋರ್ಗೆ 55 ಕಿಮೀ ಸೈಕಲ್ನಲ್ಲಿ ಓಡಿದ್ದಾನೆ ಘಟನೆ ನಡೆದಿದೆ.
ಈ ಕುರಿತಂತೆ ಮಾತನಾಡಿರುವ ಉಜ್ಜಯಿನಿಯ ನಗರ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್ಪಿ) ವಿನೋದ್ ಕುಮಾರ್ ಮೀನಾ, 8ನೇ ತರಗತಿಯ ವಿದ್ಯಾರ್ಥಿ ಮಂಗಳವಾರ ತನ್ನ ಮನೆಯಿಂದ ನಾಪತ್ತೆಯಾಗಿದ್ದು, ಆತನ ಪೋಷಕರು ಪೊಲೀಸರಿಗೆ ನಾಪತ್ತೆಯಾದ ಬಗ್ಗೆ ದೂರು ಸಲ್ಲಿಸಿದ್ದಾರೆ ಎಂದಿದ್ದಾರೆ.
ಹುಡುಗ ತನ್ನ ತಾಯಿಯ ಮೊಬೈಲ್ ಫೋನ್ ತೆಗೆದುಕೊಂಡು ಓಡಿ ಹೋಗಿದ್ದಾನೆ. ಸಿಸಿಟಿವಿ ಫುಟೇಜ್ ಆಧರಿಸಿ ಬಾಲಕನನ್ನು ಪತ್ತೆ ಮಾಡಲಾಗಿದೆ.
ಬಾಲಕ ತನ್ನ ತಾಯಿಯ ಮೊಬೈಲ್ ಫೋನ್ನಲ್ಲಿ 28 ಗೇಮ್ಗಳನ್ನು ಡೌನ್ಲೋಡ್ ಮಾಡಿಕೊಂಡಿದ್ದನು. ಆನ್ಲೈನ್ ಗೇಮ್ ಡೆವಲಪರ್ ಆಗಲು ಕೋಡಿಂಗ್ ಕಲಿಯಲು ಮುಂಬೈಗೆ ಮತ್ತು ನಂತರ ಅಮೆರಿಕಕ್ಕೆ ಪ್ರಯಾಣಿಸಲು ಯೋಜಿಸಿದ್ದಾಗಿ ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ.
ಮಕ್ಕಳ ಕಲ್ಯಾಣ ಸಮಿತಿಯು ಬಾಲಕನಿಗೆ ಸಮಾಲೋಚನೆ ನಡೆಸಿ ನಂತರ ಆತನ ಪೋಷಕರಿಗೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post