ಹಾಸನ: 2019ರ ಲೋಕಸಭೆಗೆ ಚುನಾವಣೆ ಘೋಷಣೆಯಾಗಿ ದೇಶದಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಹಾಸನದಲ್ಲಿ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗುತ್ತಿದೆ.

ಹಾಸನ ಜಿಲ್ಲೆಯಾದ್ಯಂತ ಅಳವಡಿಸಲಾಗಿದ್ದ ರಾಜಕೀಯ ಫೆಕ್ಸ್’ಗಳು ಹಾಗೂ ವಾರ್ತಾ ಇಲಾಖೆಯ ಫಲಕ ಜಾಹೀರಾತುಗಳನ್ನು ಚುನಾವಣಾ ಆಯೋಗದ ನಿಯಮ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಆದೇಶದಂತೆ ತೆರವುಗೊಳಿಸುವ ಕಾರ್ಯ ನಿನ್ನೆಯಿಂದಲೇ ಆರಂಭವಾಗಿದ್ದು, ಇಂದೂ ಸಹ ಹಲವೆಡೆ ಮುಂದುವರೆದಿದೆ.



















