ಕೋಲಾರ: 2019ರ ಲೋಕಸಭಾ ಚುನಾವಣೆ ಘೋಷಣೆಯಾಗಿ ದೇಶದಾದ್ಯಂತ ನೀತಿಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಕೋಲಾರದ ಹೆದ್ದಾರಿ ಸೇರಿದಂತೆ ಜಿಲ್ಲೆಯಾದ್ಯಂತ ಫಲಕಗಳ ಜಾಹೀರಾತನ್ನು ತೆರವುಗೊಳಿಸಿಲಾಗುತ್ತಿದೆ.
ನಿನ್ನೆಯಿಂದಲೇ ಸಿಬ್ಬಂದಿಗಳು ಜಾಹೀರಾತುಗಳ ತೆರವು ಕಾರ್ಯದಲ್ಲಿ ನಿರತವಾಗಿದ್ದು, ಜಿಲ್ಲೆಯಾದ್ಯಂತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹೆದ್ದಾರಿ ಫಲಕಗಳ ಜಾಹೀರಾತುಗಳನ್ನು ತೆರವುಗೊಳೊಸುತ್ತಿದ್ದಾರೆ.
ಇನ್ನು, ಲೋಕಸಭಾ ಚುನಾವಣೆ 2019 ಘೋಷಣೆಯಾದ ಹಿನ್ನೆಲೆ, ತಮ್ಮ ಕಛೇರಿ ನ್ಯಾಯಾಂಗ ಸಭಾಂಗಣದಲ್ಲಿ ಕೋಲಾರ ಕ್ಷೇತ್ರ (28) ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ಚುನಾವಣಾ ಸಿದ್ಧತೆ ಕುರಿತು ಪತ್ರಿಕಾಗೋಷ್ಠಿ ನಡೆಸಿ, ಚುನಾವಣೆ ಕುರಿತಾಗಿ ಮಾಹಿತಿ ನೀಡಿದರು.




















