ಕಲ್ಪ ಮೀಡಿಯಾ ಹೌಸ್ | ಕೊಯಮತ್ತೂರು |
ಟಿಕೇಟ್ ಸಿಗದ ಹಿನ್ನೆಲೆಯಲ್ಲಿ ಕೀಟನಾಶಕ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದ ಈರೋಡ್ ಸಂಸದ ಮತ್ತು ಹಿರಿಯ ಎಂಡಿಎಂಕೆ ನಾಯಕ ಎ. ಗಣೇಶ್ ಮೂರ್ತಿ(77) A Ganesh Murthy ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಮಾರ್ಚ್ 24ರಂದು ಕೀಟನಾಶಕ ಸೇವಿಸಿದ್ದ ಅವರನ್ನು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಕೊನೆಯುಸಿರೆಳೆದಿದ್ದಾರೆ.

Also read: ಇದೇ ಚೇಲಾಗಳೇ ನಿಮಗಾಗಿ ಹಿಂದೆ ದುಡಿದಿದ್ದು, ನೆನಪಿರಲಿ: ಮಧು ಬಂಗಾರಪ್ಪಗೆ ರಾಘವೇಂದ್ರ ಚಾಟಿ
ಗಣೇಶಮೂರ್ತಿ ಮಾರ್ಚ್ 24 ರಂದು ಈರೋಡ್ ಪೆರಿಯಾರ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಕಂಡು ಕುಟುಂಬಸ್ಥರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ನಂತರ, ಅವರನ್ನು ಕೊಯಮತ್ತೂರಿನ ಕೋವೈ ವೈದ್ಯಕೀಯ ಕೇಂದ್ರ ಮತ್ತು ಆಸ್ಪತ್ರೆಗೆ (ಕೆಎಂಸಿಎಚ್) ಸ್ಥಳಾಂತರಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post