No Result
View All Result
Sagara Engulfed In The Ocean of Music
English Articles

Sagara Engulfed In The Ocean of Music

by ಕಲ್ಪ ನ್ಯೂಸ್
March 23, 2026
0

Kalpa Media House  |  Special Article by Rasikapriya  | An invigorating music festival held recently at Sagara, Shimoga Dist., took...

Read moreDetails
MAHE Introduces ‘MAGIC’ to Power AI-Driven Academic and Administrative Transformation

MAHE Introduces ‘MAGIC’ to Power AI-Driven Academic and Administrative Transformation

March 23, 2026
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
  • Advertise With Us
  • Grievances
  • About Us
  • Contact Us
Wednesday, March 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಬಲಿದಾನ ದಿನವನ್ನು ರಕ್ತದಾನದಿಂದ ಆಚರಿಸುವ ಬನ್ನಿ

ಬ್ರಿಟೀಷರನ್ನು ಅಕ್ಷರಶಃ ಅಲುಗಾಡಿಸಿದ್ದ ವೀರಪುತ್ರರ ಬಲಿದಾನ ದಿನ ನಾಳೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 22, 2021
in Special Articles
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

23 ಮಾರ್ಚ್ ಭಾರತೀಯರಿಗೆ ಅಚ್ಚಳಿಯದೇ ಮನದಲ್ಲುಳಿಯುವ ದಿನ. ಬಲಿದಾನವೆಂದರೇನೆಂದು ಅರಿಯದ ಇಂದಿನ ಯುವ ಪೀಳಿಗೆ ಆ ಮೈನವಿರೇಳಿಸುವ ರೋಚಕ ಘಟನೆಗಳನ್ನೊಮ್ಮೆ ಅವಲೋಕಿಸಿದರೆ ರೋಮ ರೋಮಗಳು ಸೆಟೆದು ನಿಲ್ಲುತ್ತವೆ. 90 ವರ್ಷಗಳ ಹಿಂದೆ ನಡೆದ ಘಟನೆಯಾದರೂ ಇಂದಿಗೂ ಪ್ರತಿ ಭಾರತೀಯನ ರಕ್ತ ಕುದಿಯುವಂತೆ ಮಾಡುವ ಆ ಮೂವರ ಗಲ್ಲು ಶಿಕ್ಷೆ ಲಕ್ಷಾಂತರ ಯುವ ಯೋಧರಿಗೆ ಸ್ವಾತಂತ್ರ್ಯ ದೀಕ್ಷೆ ನೀಡಿ ’ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಯ ಮೂಲಕ ಕಿಚ್ಚು ಹಚ್ಚಿ ಬ್ರಿಟಿಷರಿಗೆ ಹುಚ್ಚೆಬ್ಬಿಸುವಂತೆ ಮಾಡಿದ ಸ್ಮರಣೀಯ ದಿನ ಈ ಬಲಿದಾನದ ದಿನ.
ಬ್ರಿಟೀಷರನ್ನು ಬಡಿದೋಡಿಸಲು, ಭತ್ತ ಬೆಳೆಯುವ ಬದಲು ಬಂದೂಕು ಬೆಳೆಯೋಣ ಎಂದು ಬಾಲ್ಯದಲ್ಲೇ ಅಬ್ಬರಿಸಿದ್ದ ಭಗತ್ ಸಿಂಗ್, ಆರನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಬಾಲಗಂಗಾಧರ ತಿಲಕರ ಪ್ರಭಾವಕ್ಕೊಳಗಾಗಿ ದೇಶ ಮೆಚ್ಚಿದ ಧೀರನಾದ ಶಿವರಾಮ್ ರಾಜಗುರು, ಯೌವನದ ಪರ್ವ ಕಾಲದಲ್ಲಿ ಹದಿಹರೆಯದ ಯುವಕರು ಕಾಣುವ ಕನಸಿನ ಬದಲಾಗಿ ದೇಶದ ದಾಸ್ಯ ಮುಕ್ತಿಯ ಕನಸು ಕಂಡ ಸುಖದೇವ್ ಥಾರ್ಪ, ಈ ಮೂವರೂ ಬಂಧ ಮುಕ್ತ ಭಾರತಾಂಬೆಗಾಗಿ ’ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಗಳ ಮಳೆ ಸುರಿಸುತ್ತ ಒಬ್ಬರನೊಬ್ಬರು ತಬ್ಬಿಕೊಂಡು ನಗುನಗುತ್ತ ಗಲ್ಲು ಗಂಬವೇರಿದ ಬಲಿದಾನ ದಿನವಿದು.
ಕ್ಷಣ ಕ್ಷಣಕ್ಕೂ ಸ್ವಾತಂತ್ರ್ಯ ಸೇನಾನಿಗಳಲ್ಲಿ ಕಿಚ್ಚು ಹಚ್ಚುತ್ತ ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರಿಟಿಷರಿಗೆ ಚಳ್ಳೇಹಣ್ಣು ತಿನ್ನಿಸುತ್ತ, ಯಾವ ಕ್ಷಣದಲ್ಲಿ ಏನು ಮಾಡಿಯಾರೋ ಎಂಬ ಭಯ ಬಿತ್ತಿದ್ದ ಈ ಮೂವರು ಬದುಕಿದ್ದಷ್ಟೂ ತಮಗೆ ತಲೆ ನೋವು ತಪ್ಪಿದ್ದಲ್ಲ ಎಂದರಿತ ಬ್ರಿಟಿಷರು 24 ಮಾರ್ಚ್1931ಕ್ಕೆ ನಿಗಧಿಯಾಗಿದ್ದ ಭಗತ್ ಸಿಂಗ್, ಶಿವರಾಮ್ ರಾಜಗುರು ಹಾಗೂ ಸುಖದೇವ್ ಥಾಪರ್ ಇವರ ಗಲ್ಲು ಶಿಕ್ಷೆಯನ್ನು ಹನ್ನೊಂದು ತಾಸು ಮೊದಲೇ ಹಿಂದೂಡಿಕೆ ಮಾಡಿ ಮಾರ್ಚ್ 23ರ ಸಂಜೆ 07:33 ಕ್ಕೆ ನೇಣುಗಂಬಕ್ಕೇರಿಸಿ ದರ್ಪದ ದಾರ್ಷ್ಟ್ಯ ಮೆರೆದರು ಆ ಬ್ರಿಟಿಷರು. ಚಳುವಳಿಗಾರರಿಗೆ ಚಳಿ ಹುಟ್ಟಿಸಲು ಕೈಗೊಂಡ ಬ್ರಿಟಿಷರ ಈ ನಿರ್ಣಯ ನೀರಿನಲ್ಲಿ ತೇಲಿಬಿಟ್ಟಂತಾಯಿತು. ಗಲ್ಲು ಶಿಕ್ಷೆಯಿಂದ ಸ್ವಾತಂತ್ರ್ಯ ಕಹಳೆ ಕುಂದಬಹುದೆಂದುಕೊಂಡಿದ್ದ ಕುಟಿಲ ಬ್ರಿಟಿಷರ ಊಹೆ ಸುಳ್ಳಾಯಿತು. ಹುತಾತ್ಮರಾದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖದೇವ್ ಹಚ್ಚಿದ್ದ ಸ್ವಾತಂತ್ರ್ಯದ ಕಿಡಿ ಮಿಂಚಿನಂತೆ ಸಂಚರಿಸಿ ಸ್ವಾತಂತ್ರ್ಯ ಹೋರಾಟಗಾರರಿಗೆ ಹುಚ್ಚೆಬ್ಬಿಸಿ ಹೋರಾಟದ ವೇಗ ಹೆಚ್ಚಿಸಿದ್ದು ಮಾತ್ರ ಹೋರಾಟದಲ್ಲಿ ಹರಿದ ನೆತ್ತರಿನಷ್ಟೇ ಸತ್ಯ ಎಂಬುದಕ್ಕೆ ಪುರಾವೆ ಒದಗಿಸಿತು.


ವ್ಯಕ್ತಿಯನ್ನು ಸಾಯಿಸಬಹುದು, ಆದರೆ ವಿಚಾರಗಳನ್ನಲ್ಲ ಎಂದು ಪ್ರತಿಪಾದಿಸುತ್ತಿದ್ದ ಭಗತ್ ತನ್ನ ವಿಚಾರಧಾರೆಗಳಿಂದಲೇ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದು ಗಲ್ಲಿಗೇರುವ ಹಿಂದಿನ ದಿನ ತನ್ನ ವಕೀಲ ಪ್ರಾಣನಾಥ ಮೆಹ್ತಾರ ಕೊನೆಯ ಭೇಟಿಯಲ್ಲಿ ತಾನು ತರಲು ಹೇಳಿದ್ದ The revolutionary Lenin ಪುಸ್ತಕವನ್ನು ಪಡೆದು ಕ್ಷಣವೂ ತಡಮಾಡದೇ ಓದಲಾರಂಭಿಸಿದ ಆ ಕ್ಷಣಗಳನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ. ಕಟ್ಟಕಡೆಯ ಭೇಟಿಗೆಂದು ಆಗಮಿಸಿದ ತಾಯಿಗೆ ಹೇ ಮಾತೆಯೇ, ನೂರು ಜನ್ಮ ಹೊತ್ತು ಬರುವೆ, ಆದರೆ ಭಾರತಾಂಬೆಯ ದಾಸ್ಯಮುಕ್ತಿಗಾಗಿ ಇಂತಹ ಒಂದು ಸಾವಿಗೆ ಹೆದರಲಾರೆ ಎಂಬ ಕಂಚಿನ ಕಂಠದ ಆ ಮಾತುಗಳು ಹೆತ್ತ ತಾಯಿಯ ಹೆಮ್ಮೆ ಹಾಗೂ ಜನ್ಮ ನೀಡಿದ ಸಾರ್ಥಕತೆಯನ್ನು ಇಮ್ಮಡಿಗೊಳಿಸಿದ್ದವು. ನಮಗೆ ದೊರೆತ ಸ್ವಾತಂತ್ರ್ಯದ ಹಿಂದಿನ ಇಂತಹ ಸುಪುತ್ರರ ತ್ಯಾಗ ಮತ್ತು ಬಲಿದಾನವನ್ನು ಕನಿಷ್ಠ ವರ್ಷಕ್ಕೊಮ್ಮೆಯೂ ನೆನೆಯದೇ ಹೋದರೆ ಅದು ನಮಗೆ ನಾವೇ ಮಾಡಿಕೊಳ್ಳುವ ದ್ರೋಹವೇ ಸರಿ.
ಫೇಸ್ ಬುಕ್, ವಾಟ್ಸ್ಯಾಪ್ ಇನ್ಸ್ಟಾಗ್ರಾಂಗಳಲ್ಲಿ ಫೋಟೊವೊಂದನ್ನು ಪೋಸ್ಟ್‌ ಮಾಡಿದರೆ ನಮ್ಮ ಕೆಲಸ ಮುಗಿಯಿತು ಎನ್ನುವ ಯುವಜನತೆ ಎಚ್ಚೆತ್ತುಕೊಳ್ಳುವ ಸಮಯವಿದು. ಮುಂದಿನ ಪೀಳಿಗೆಗೆ ಈ ಬಲಿದಾನದ ಮಹತ್ವವನ್ನು ಕೊಂಡೊಯ್ಯುವ ಸಾರಥಿಗಳಾಗಬೇಕು ಈ ಯುವ ಜನತೆ.
ಹೌದು, ಯುವಜನಾಂಗಕ್ಕೆ ಬಲಿದಾನದ ಮಹತ್ವ ಸಾರುವ ಪ್ರತೀಕವಾಗಿ ಮಾರ್ಚ್ 23ರ ನಾಳೆ ರಾಷ್ಟ್ರದಾದ್ಯಂತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಭಾರತಾಂಬೆಯ ಮುಕ್ತಿಗಾಗಿ ಜೀವನವನ್ನೇ ಮುಡಿಪಾಗಿಟ್ಟು ಪ್ರಾಣವನ್ನೇ ತ್ಯಾಗ ಮಾಡಿದವರ ನೆನಪಿನಲ್ಲಿ ದೇಶದಾದ್ಯಂತ ನಡೆಸಲುದ್ದೇಶಿಸಿರುವ ರಕ್ತದಾನ ಶಿಬಿರಗಳು ಯುವಜನಾಂಗಕ್ಕೆ ಪ್ರೇರಣೆ ನೀಡಲೆಂದೇ ಆಯೋಜಿತವಾಗಿವೆ.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಎನ್‌ಯಎಫ್’ಎಎ ಸಾಮಾಜಿಕ ಸಂಸ್ಥೆಯ ಸಹಯೋಗದಲ್ಲಿ ದಿನಾಂಕ 23 ಮಾರ್ಚ್ 2021 ರಂದು ದೇಶಾದ್ಯಂತ ರಕ್ತದಾನ ಶಿಬಿರಗಳ ಮೂಲಕ ಗಿನ್ನೆಸ್ ಪುಸ್ತಕದಲ್ಲಿ ದಾಖಲೆ ಬರೆಯುವ ನಿಟ್ಟಿನಲ್ಲಿ ಆಯೋಜನೆ ಮಾಡಲಾಗಿರುವ ಈ ಸತ್ಕಾರ್ಯದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ರೆಡ್ ಕ್ರಾಸ್ ವಿನಂತಿಸಿದೆ.

ಅಂದು ವೀರಸನ್ಯಾಸಿ ಸ್ವಾಮಿ ವಿವೇಕಾನಂದರು ನೀಡಿದ್ದ ’ಏಳಿ ಎದ್ದೇಳಿ, ಗುರಿ ಮುಟ್ಟುವತನಕ ನಿಲ್ಲದಿರಿ’ ಎಂಬ ಕರೆ ಸರ್ವಕಾಲಕ್ಕೂ ಪ್ರಸ್ತುತ. ಯಾವುದೇ ಸ್ವಾತಂತ್ರ್ಯ ಹೋರಾಟಕ್ಕಲ್ಲ ಈ ಕರೆ. ಯಾವುದೇ ಬಲಿದಾನಕ್ಕಲ್ಲ ಈ ಕರೆ. ಬಲಿದಾನದ ನೆನಪಿಗಾಗಿ ಕರೆದಿರುವ ಈ ಕರೆ. ಭಾರತೀಯರ ಕೆಚ್ಚೆದೆಗೆ ಕಿಚ್ಚು ಹಚ್ಚಿ ಹೋರಾಟದ ಹಾದಿ ಬದಲಿಸಿ ನಮ್ಮೆಲ್ಲರ ಮನೆ ಮನೆಗಳಲ್ಲಿ ಅಚ್ಚಳಿಯದೇ ಉಳಿದ ಹೆಮ್ಮೆಯ ಸುಪುತ್ರರ ತ್ಯಾಗವನ್ನು ನೆನೆಯಲು ಈ ಕರೆ. ಭಗತ್ ಸಿಂಗ್, ಶಿವರಾಮ್, ರಾಜಗುರು ಮತ್ತು ಸುಖದೇವ್ ಥಾಪರ್ ಈ ಮೂವರ ಬಲಿದಾನವನ್ನು ರಕ್ತದಾನದ ಮೂಲಕ ಆಚರಿಸೋಣ ಬನ್ನಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Balidan DiwasBhagat SinghDay of sacrificeKannada News WebsiteLatest News KannadaLocal NewsMalnad NewsShimogaShivamoggaShivamogga NewsSpecial ArticleSukhdev ThaparSwami VivekanandaThe revolutionary Leninಬಲಿದಾನ ದಿನಭಗತ್ ಸಿಂಗ್ರಾಜಗುರುಶಿವರಾಮ್ಸುಖದೇವ್ ಥಾಪರ್ಸ್ವಾಮಿ ವಿವೇಕಾನಂದ
Share206Tweet123Send
Previous Post

ಅದ್ದೂರಿಗಿಂತಲೂ ಅರ್ಥಪೂರ್ಣ ಜನ್ಮದಿನ ಆಚರಿಸಿಕೊಂಡ ಕೆ.ಈ ಕಾಂತೇಶ್

Next Post

ಜಲವೇ ಜೀವನ: ನಾಗರಾಜ ಪರಿಸರ ಅಭಿಮತ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಜಲವೇ ಜೀವನ: ನಾಗರಾಜ ಪರಿಸರ ಅಭಿಮತ

ಜಲವೇ ಜೀವನ: ನಾಗರಾಜ ಪರಿಸರ ಅಭಿಮತ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಸ್ವಾರ್ಥ ರಹಿತ ತ್ಯಾಗದಿಂದ ಭಗತ್ ಸಿಂಗ್ ಅಮರತ್ವ | ಸುರೇಶ್ ಋಗ್ವೇದಿ ಅಭಿಮತ

ಸ್ವಾರ್ಥ ರಹಿತ ತ್ಯಾಗದಿಂದ ಭಗತ್ ಸಿಂಗ್ ಅಮರತ್ವ | ಸುರೇಶ್ ಋಗ್ವೇದಿ ಅಭಿಮತ

March 24, 2026
ಏ.11-26 | ಇಸ್ಕಾನ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ

ಏ.11-26 | ಇಸ್ಕಾನ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ

March 24, 2026
ಶಿವಮೊಗ್ಗದಲ್ಲಿ ಅರಳಿದ ಮೊಗ್ಗುಗಳು-5 | 80 ವಸಂತಗಳನ್ನು ಸಾರ್ಥಕವಾಗಿ ಕಳೆದ ಸಜ್ಜನಿಕೆಯ ಸೀತಾರಾಮ

ಶಿವಮೊಗ್ಗದಲ್ಲಿ ಅರಳಿದ ಮೊಗ್ಗುಗಳು-5 | 80 ವಸಂತಗಳನ್ನು ಸಾರ್ಥಕವಾಗಿ ಕಳೆದ ಸಜ್ಜನಿಕೆಯ ಸೀತಾರಾಮ

March 24, 2026
ತೀರ್ಥಹಳ್ಳಿ-ಮಂಗಳೂರು ಸೇರಿ 3 ರೈಲ್ವೆ ಮಾರ್ಗದ ಒಪ್ಪಿಗೆಗೆ ಎಂಪಿ ರಾಘವೇಂದ್ರ ಆಗ್ರಹ

ಸ್ವಾಭಿಮಾನದ ಬದುಕಿಗೆ ವಿಶ್ವಕರ್ಮ ಯೋಜನೆ ಶಕ್ತಿ ತುಂಬಿದೆ: ಸಂಸದ ರಾಘವೇಂದ್ರ

March 24, 2026
ಗಮನಿಸಿ! ಈ ಎರಡು ದಿನ ಮೈಸೂರು-ಶಿವಮೊಗ್ಗ ರೈಲು ಸಂಚಾರದಲ್ಲಿ ಬದಲಾವಣೆ

ಗುಡ್ ನ್ಯೂಸ್ | ಹುಬ್ಬಳ್ಳಿ – ರಾಮೇಶ್ವರಂ ನಡುವೆ ವಿಶೇಷ ರೈಲು | ಇಲ್ಲಿದೆ ಡೀಟೇಲ್ಸ್

March 24, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL