ಬ್ಯಾಂಕಾಕ್: ವಿದೇಶಿಗರು ಭಾರತದಲ್ಲಿ ಹೂಡಿಕೆ ಮಾಡಲು ಇದು ಸಕಾಲವಾಗಿದ್ದು, ಸುಲಭ ವ್ಯವಹಾರಕ್ಕಾಗಿ ಭಾರತದಲ್ಲಿ ಹೂಡಿಕೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.
ಥಾಯ್ಲೆಂಡ್’ನ ಬ್ಯಾಂಕಾಕ್’ನಲ್ಲಿ ನಡೆಯುತ್ತಿರುವ ಭಾರತದ ಪ್ರಮುಖ ವ್ಯಾಪಾರ ಸಮೂಹದ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಭಾಗವಹಿಸಿ ಇಂದು ಅವರು ಮಾತನಾಡಿದರು.
ಹೂಡಿಕೆ ಮತ್ತು ಸುಲಭ ವ್ಯವಹಾರಕ್ಕಾಗಿ, ಭಾರತಕ್ಕೆ ಬನ್ನಿ. ಹೊಸತನ ಮತ್ತು ಪ್ರಾರಂಭಿಸಲು, ಭಾರತಕ್ಕೆ ಬನ್ನಿ. ಕೆಲವು ಅತ್ಯುತ್ತಮ ಪ್ರವಾಸಿ ತಾಣಗಳು ಮತ್ತು ಜನರ ಆತ್ಮೀಯ ಆತಿಥ್ಯವನ್ನು ಅನುಭವಿಸಲು, ಭಾರತಕ್ಕೆ ಬನ್ನಿ. ಭಾರತವು ನಿಮ್ಮನ್ನು ತೆರೆದ ತೋಳುಗಳಿಂದ ಕಾಯುತ್ತಿದೆ ಎಂದು ಕರೆ ನೀಡಿದರು.
ಭಾರತದಲ್ಲಿ ಆಗುತ್ತಿರುವ ಸಕಾರಾತ್ಮಕ ಬದಲಾವಣೆಗಳನ್ನು ಎತ್ತಿ ತೋರಿಸಿದ ಅವರು, ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದಲ್ಲಿರಲು ಉತ್ತಮ ಸಮಯ ಎಂದು ಒತ್ತಿ ಹೇಳಿದರು. ಭಾರತದಲ್ಲಿ ಇಂದು ನಡೆಯುತ್ತಿರುವ ಕೆಲವು ಸಕಾರಾತ್ಮಕ ಬದಲಾವಣೆಗಳ ಚಿತ್ರವನ್ನು ನಿಮಗೆ ನೀಡಲು ನಾನು ಉತ್ಸುಕನಾಗಿದ್ದೇನೆ. ನಾನು ಇದನ್ನು ಸಂಪೂರ್ಣ ವಿಶ್ವಾಸದಿಂದ ಹೇಳುತ್ತೇನೆ- ಇದು ಭಾರತದಲ್ಲಿರಲು ಇದು ಅತ್ಯುತ್ತಮ ಸಮಯ ಎಂದರು.
Get In Touch With Us info@kalpa.news Whatsapp: 9481252093, 94487 22200
Discussion about this post