ಶ್ರೀನಗರ: ನಿಮ್ಮ ಸೈನಿಕರನ್ನು ಹೊಡೆದು ಬಿಸಾಕಿದಿವಿ, ಬಿಳಿ ಧ್ವಜ ತಂದು ನಿಮ್ಮವರ ಮೃತ ದೇಹ ತಗೊಂಡು ಹೋಗಿ:
ಇದು, ಗಡಿಯೊಳಗೆ ನುಸುಳುತ್ತಿದ್ದ ಪಾಕಿಸ್ಥಾನದ ಯೋಧರು ಹಾಗೂ ಉಗ್ರರನ್ನು ಅಟ್ಟಾಡಿಸಿ ಬೇಟೆಯಾಡಿದ ಹೆಮ್ಮೆಯ ಭಾರತೀಯ ಯೋಧರು ಪಾಕ್ ವಿರುದ್ಧ ಘರ್ಜಿಸಿರುವ ಪರಿ.
ಹೌದು… ಜಮ್ಮು ಕಾಶ್ಮೀರದ ಕೇರಾನ್ ಸೆಕ್ಟರ್’ನ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಐದಾರು ಮಂದಿ ಪಾಕಿಸ್ಥಾನದ ಬಿಎಟಿ ಸೈನಿಕರು ಹಾಗೂ ಉಗ್ರರನ್ನು ನಿನ್ನೆ ಹತ್ಯೆ ಮಾಡಲಾಗಿದೆ.
ಈ ಬೆಳವಣಿಗೆ ನಂತರ ಹೇಳಿಕೆ ನೀಡಿರುವ ಭಾರತೀಯ ಸೇನೆ, ಬಿಳಿ ಧ್ವಜದೊಂದಿಗೆ ನಿಮ್ಮ ಸೈನಿಕರ ಮೃತದೇಹಳಗಳನ್ನು ತೆಗೆದುಕೊಂಡು ಹೋಗಿ ಎಂದು ಭಾರತೀಯ ಸೇನೆ ಹೇಳಿದೆ. ಆದರೆ, ಇದಕ್ಕೆ ಪಾಕಿಸ್ತಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
Discussion about this post