ಶಿವಮೊಗ್ಗ: ಮಲವಗೊಪ್ಪ ಸಮೀಪ ಅಪಘಾತ ವಲಯವಾಗಿರುವ ಹಿನ್ನೆಲೆಯಲ್ಲಿ ಪರಿಹಾರ ಮಾರ್ಗಗಳನ್ನು ಮಾಡಿ ಎಂದು ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರಿಗೆ ಸ್ಥಳೀಯರು ಮನವಿ ಮಾಡಿದರು.
ವಾರ್ಡ್ ನಂ.16ರ ಮಲವಗೊಪ್ಪಕ್ಕೆ ನಿನ್ನೆ ಆಯುಕ್ತರು ಭೇಟಿ ನೀಡಿ, ಪರಿಶೀಲನೆ ಮಾಡಿದ ವೇಳೆ ಸ್ಥಳೀಯರು ಹಲವು ಅಹವಾಲು ಸಲ್ಲಿಸಿದರು.
ಈ ವೇಳೆ ಸ್ಥಳೀಯರ ಮನವಿಗೆ ಪ್ರತಿಕ್ರಿಯಿಸಿದ ಆಯುಕ್ತರು, ಈ ಪ್ರದೇಶ ಮಹಾನಗರಪಾಲಿಕೆಯ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆಗೆ ಪ್ರಸ್ತಾವನೆ ಮಾಡಲು ಸಲಹೆ ನೀಡಿದರು.
ಮಲವಗೊಪ್ಪದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಕಂಡು ಬಂದಿರುವುದಾಗಿ ಅಲ್ಲಿನ ಕಾರ್ಪೋರೇಟರ್ ಆರ್.ಸಿ. ನಾಯಕ್ ತಿಳಿಸಿದರು ಮತ್ತು ಅಲ್ಲಿ ವಾಟರ್ ಟ್ಯಾಂಕ್ ತುಂಬಿದರು ಸಹ ನೀರಿನ ಸಮಸ್ಯೆಗಳನ್ನು ಜನರು ಎದುರುಸುತ್ತಿರುವುದು ಮತ್ತು ಆ ವಾಟರ್ ಟ್ಯಾಂಕ್ ನ ಬಳಿಯೇ ಬೇರೊಂದು ಟ್ಯಾಂಕ್ ನಿರ್ಮಿಸಲು ಅವರು ಯೋಜನೆ ಮಾಡಿದ್ದರು. ಆದರೆ ಅದು ಸರ್ಕಾರದ ಜಾಗವಾಗಿದ್ದ ಕಾರಣ ಅದರಲ್ಲಿ ನಾಡ ಕಛೇರಿ ನಿರ್ಮಾಣವಾಗಿರುವುದು ಅಲ್ಲಿನ ಕಾರ್ಪೋರೇಟರ್’ಗೆ ತಮ್ಮ ಯೋಜನೆಗಳಿಗೆ ತೊಂದರೆಯಾಗಿರುವುದಾಗಿ ಆಯುಕ್ತರಿಗೆ ತಿಳಿಸಿದರು ಮತ್ತು ನಿದಿಗೆ ಮಂಡಲ್ ಪಂಚಾಯ್ತಿಯಿಂದ ಖಾತೆ ಮಾಡಿಸಿಕೊಂಡಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆಗೆ ಸಂಬಂಧಪಟ್ಟ ಸ್ಥಳವಾದರೆ ಏನಾದರು ಮಾಡಬಹುದು. ಆದರೆ ಸರ್ಕಾರದ ಸ್ಥಳವಾದರೆ ಈ ವಿಚಾರವಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ ಮತ್ತು ಅನುಮತಿ ಇಲ್ಲದೆ ಕಟ್ಟಿರುವ ಗಡಿಗಳನ್ನು ಪರಿಷ್ಕರಣೆ ಮಾಡಬೇಕಾಗುತ್ತದೆ ಎಂದು ಆಯುಕ್ತರು ತಿಳಿಸಿದರು.
ಜಟ್ ಪಟ್ ನಗರ, ವಿವೇಕಾನಂದ ಬಡಾವಣೆಯಲ್ಲಿ ಇಂಜಿನಿಯರ್ ಅವರುಗಳ ಕಳಪೆ ಕಾಮಗಾರಿಯಾಗಿರುವುದು ಮತ್ತು ಮುನ್ಸೂಚನೆ ನೀಡಿರುವುದಿಲ್ಲವೆಂದ ಅಲ್ಲಿನ ಕಾರ್ಪೋರೇಟರ್ ಆರ್.ಸಿ. ನಾಯ್ಕ್ ಅವರು ಅಭಿಯಂತರರುಗಳ ಮೇಲೆ ಆರೋಪ ಮಾಡಿ, ಯುಜಿಡಿ ಕನೆಕ್ಷನ್ ಲಭ್ಯವಿಲ್ಲವೆಂದು ತಿಳಿಸಿದರು.
ಅದನ್ನು ಪರಿಶೀಲಿಸಿದ ಆಯುಕ್ತರು ಮಹಾನಗರಪಾಲಿಕೆಯ ಅಭಿಯಂತರರುಗಳಿಗೆ ಮತ್ತು ಎಇಇ ಅವರಿಗೆ ವಿಚಾರಿಸಿದಾಗ 3 ತಿಂಗಳೊಳಗೆ ಟೆಂಡರ್ ಕರೆದಿದ್ದು ಸರಿಮಾಡಿಸುವುದಾಗಿ ಅಭಿಯಂತರರು ತಿಳಿಸಿದರು.
ಸುಮಾರು 1200 ಮನೆಗಳಿರುವುದಾಗಿ ದಿನ ಬಿಟ್ಟು ದಿನ ಕಸದ ಗಾಡಿ ಬಂದು ಕಸದ ಸಮಸ್ಯೆಯನ್ನು ಬಗೆಹರಿಸಲು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಆಯುಕ್ತರು ಸ್ಥಳ ಪರಿಶೀಲನೆ ನಡೆಸುತ್ತಿರುವ ವೇಳೆ ರಸ್ತೆಯ ಬದಿಯಲ್ಲಿ ಸಾಕಷ್ಟು ಕಸಗಳು ಕಂಡುಬಂದಿದ್ದು ಅದನ್ನು ಗಮನಿಸಿದ ಆಯುಕ್ತರು ಸೂಕ್ತ Disposal mechanism ಮೂಲಕ ತಕ್ಷಣವೇ ತೆಗೆಸಬೇಕೆಂದು ಆದೇಶಿಸಿದರು.
ಇನ್ನು, ಸ್ಮಶಾನದ ಜಾಗವನ್ನು ಆಗಸ್ಟ್ 15 ರಂದು ವಿಶೇಷವಾದ ಯೋಜನೆಯಡಿ ಸ್ವಚ್ಚಗೊಳಿಸುವುದಾಗಿ ಆರೋಗ್ಯಾಧಿಕಾರಿಗಳು ಡಾ. ಶಿವಯೋಗಿ ಎಲಿರವರು ತಿಳಿಸಿದ್ದಾರೆ. ರಸ್ತೆಯ ಸಮಸ್ಯೆಗೆ ಕ್ರಮ ತೆಗೆದುಕೊಳ್ಳಲು ಎಸ್.ಎಫ್.ಸಿ ನಿಧಿಯ ಮೂಲಕ ಪರಿಹರಿಸಲು ಈಗಾಗಲೇ ಮೀಟಿಂಗ್’ನಲ್ಲಿ ಮಾತನಾಡಿರುವುದಾಗಿ ಮತ್ತು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲು ಆಯುಕ್ತರು ತಿಳಿಸಿದರು.
ಕೆಲವು ಸಮಸ್ಯೆಗಳಾದ ಅಂಗನವಾಡಿಯಲ್ಲಿ ಸ್ವಚ್ಚ ನೀರು ಬರುತ್ತಿಲ್ಲವೆಂದು, ಪುರಾತನ ಕಲ್ಯಾಣಿ ಚೆನ್ನಾಗಿ ಹೊಸದರಂತೆ ಮಾಡಿಸುವುದಾಗಿ, ಚಾನೆಲ್ ನೀರು ಜೆಸಿಬಿ ಮೂಲಕ ಆ ದಿನ ಮಧ್ಯಾಹ್ನವೇ ಸ್ವಚ್ಚಗೊಳಿಸುವ ಸಮಸ್ಯೆಯಾಗಲಿ, ಗಣಪತಿ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಿಸುವ ಬೇಡಿಕೆ ಇಟ್ಟರು. ಖಾತೆ ಬದಲಿಯಾಗಬೇಕಾಗಿದ್ದು ಅದು ಸರ್ಕಾರಿ ಜಾಗವಾಗಿದೆ ಮತ್ತು ಆ ಸ್ಥಳ ಮಹಾನಗರಪಾಲಿಕೆಗೆ ಸಂಬಂಧಿಸಿದ ಜಾಗವೇ ಇಲ್ಲವೆ ಎಂಬ ಗೊಂದಲವು ಇದ್ದು ಸೂಕ್ತ ಕ್ರಮ ತೆಗೆದುಕೊಳ್ಳಲು ರೆವಿನ್ಯೂ ಅಧಿಕಾರಿ ನಾಗೇಂದ್ರರವರಿಗೆ ಶೀಘ್ರ ಆ ಸ್ಥಳದ ವಿಚಾರವಾಗಿ ವರದಿ ನೀಡಲು ತಿಳಿಸಿದರು.
ಹರಿಗೆ ಬಳಿ ಕೆಲವು ಸ್ಲಾಬ್ಸ್’ಗಳನ್ನು ನಿರ್ಮಿಸಲು ಬೇಡಿಕೆ ಇಟ್ಟರು ಮತ್ತು ಜ್ಯೋತಿನಗರದಲ್ಲಿ ಡ್ರೈನ್ ಸಮಸ್ಯೆಯಿದ್ದು, ಮೋರಿ ನೀರು ಮುಂದೆ ಹರಿಯದ ಸ್ಥಿತಿಯಾಗಿದೆ ಎಂದು ಕಾರ್ಪೂರೇಟರ್ ತಿಳಿಸಿದರು. ಇದಕ್ಕೆ ಆಯುಕ್ತರು ಕಾಮಗಾರಿಯನ್ನು ಆಯ್ಕೆ ಮಾಡಿ ಮಹಾನಗರಪಾಲಿಕೆಗೆ ಕಾರ್ಪೋರೇಟರ್’ಗಳು ನೀಡಬೇಕು ಮತ್ತು ಲಭ್ಯವಿರುವ ನಿಧಿಯಲ್ಲಿ ಎಷ್ಟು ಕಾಮಗಾರಿ ಸಾಧ್ಯವೂ ಅಷ್ಟು ಕಾಮಗಾರಿ ಮಾಡಿಸಬಹುದು ಎಂದು ಆಯುಕ್ತರು ತಿಳಿಸಿದರು.
Discussion about this post