ಕಲ್ಪ ಮೀಡಿಯಾ ಹೌಸ್ | ನವದೆಹಲಿ |
2024ರ ಸೆಪ್ಟೆಂಬರ್ 30ರ ಒಳಗಾಗಿ ಜಮ್ಮು ಕಾಶ್ಮೀರದಲ್ಲಿ #JammuKashmir ಚುನಾವಣೆ ನಡೆಸಬೇಕು ಎಂದು ಭಾರತ ಚುನಾವಣಾ ಆಯೋಗಕ್ಕೆ #ElectionCommissionOfIndia ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಆರ್ಟಿಕಲ್ 370ನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದು ತೀರ್ಪು ನೀಡಿದ ವೇಳೆ ಸುಪ್ರೀಂ ಕೋರ್ಟ್ #SupremeCourt ಈ ಆದೇಶ ನೀಡಿದೆ.

ಸೆ.30ರ ಒಳಗಾಗಿ ಜಮ್ಮು ಕಾಶ್ಮೀರ ವಿಧಾನಸಭೆಗೆ #AssemblyElection ಚುನಾವಣೆಗಳನ್ನು ನಡೆಸಲು ಭಾರತದ ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕು. ರಾಜ್ಯತ್ವದ ಮರುಸ್ಥಾಪನೆಯು ಸಾಧ್ಯವಾದಷ್ಟು ಬೇಗ ನಡೆಯಬೇಕು ಎಂದು ನ್ಯಾಯಪೀಠ ಹೇಳಿದೆ.
ರಾಷ್ಟ್ರಪತಿಗಳ ಮೇಲೆ ಬದ್ದವಾಗಿಲ್ಲ
370 ನೇ ವಿಧಿಯು ತಾತ್ಕಾಲಿಕ ನಿಬಂಧನೆಯಾಗಿದೆ ಎಂದು ನ್ಯಾಯಾಲಯ ಬಣ್ಣಿಸಿದೆ.

ಸಂವಿಧಾನ ಸಭೆಯ ಶಿಫಾರಸು ರಾಷ್ಟ್ರಪತಿಗಳ ಮೇಲೆ ಬದ್ಧವಾಗಿಲ್ಲ. ಜಮ್ಮು ಕಾಶ್ಮೀರ ಸಂವಿಧಾನ ಸಭೆಯು ತಾತ್ಕಾಲಿಕ ಸಂಸ್ಥೆಯಾಗಿದೆ ಎಂದಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ರಾಜ್ಯವನ್ನಾಗಿ ಆದಷ್ಟು ಬೇಗ ಮರುಸ್ಥಾಪನೆ ಮಾಡಬೇಕೆಂದು ಸೂಚಿಸಿದರು. ಜಮ್ಮು ಕಾಶ್ಮೀರ ರಾಜ್ಯವು ಸಾರ್ವಭೌಮತ್ವದ ಯಾವುದೇ ಅಂಶವನ್ನು ಉಳಿಸಿಕೊಂಡಿಲ್ಲ. ಇದು ಆಂತರಿಕ ಸಾರ್ವಭೌಮತ್ವವನ್ನು ಹೊಂದಿಲ್ಲ. 370 ನೆಯ ವಿಧಿ ಅಸಮ್ಮಿತ ಸಂಯುಕ್ತ ವ್ಯವಸ್ಥೆಯ ಲಕ್ಷಣವಾಗಿದೆ ಮತ್ತು ಸಾರ್ವಭೌಮತ್ವವಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post