ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಶಾಲಾ ಕಾಲೇಜು ಆರಂಭದ ವಿಚಾರದಲ್ಲಿ ಗೊಂದಲ ಇರುವುದು ಸತ್ಯವಾಗಿದ್ದು, ಈ ಕುರಿತಂತೆ ಶೀಘ್ರದಲ್ಲೇ ಮುಖ್ಯಮಂತ್ರಿಗಳು ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಈ ಬಗ್ಗೆ ಗೊಂದಲ ಇರೋದು ನಿಜ. ಸಿಎಂ ಜೊತೆ ಇದರ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಸಿಎಂ ಚರ್ಚಿಸಿ ಸ್ಪಷ್ಟ ತೀರ್ಮಾನವನ್ನು ಶೀಘ್ರದಲ್ಲೇ ಸಿಎಂ ಹೊರಡಿಸುತ್ತಾರೆ ಎಂದರು.
ಈ ಬಗ್ಗೆ ಎರಡು ಅಭಿಪ್ರಾಯಗಳು ಕೇಳಿ ಬಂದಿದ್ದು, ಶಾಲೆ ಪ್ರಾರಂಭಕ್ಕೆ ಕೆಲವರು ಒತ್ತಾಯಿಸಿದ್ದರೆ, ಹಲವರು ಶಾಲೆ ಪ್ರಾರಂಭ ಸದ್ಯಕ್ಕೆ ಬೇಡ ಎಂದಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಶುರುವಾಗಲಿದೆ. ಹೀಗಾಗಿ, ಗೊಂದಲ ನಿವಾರಣೆಗೆ ನಾವು ಕ್ರಮತೆಗೆದುಕೊಳ್ಳಲಿದ್ದೇವೆ. ಬ್ರಿಟನ್ ವೈರಸ್ ಪ್ರಮಾಣ ನೋಡಿ ಗಮನಹರಿಸುತ್ತೇವೆ. ಸದ್ಯಕ್ಕೆ ಯಾವುದೇ ಲಾಕ್ ಡೌನ್ ಪ್ರಸ್ತಾಪವಿಲ್ಲ ಎಂದಿದ್ದಾರೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post