ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪರ ವಿರೋಧ ವಾಗ್ದಾಳಿಗಳು ತಾರಕಕ್ಕೆ ಏರಿರುವಂತೆಯೇ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಾನು ತೋಡಿದ್ದ ಹಳ್ಳಕ್ಕೆ ಈಗ ಕಾಂಗ್ರೆಸ್ ತಾನೇ ಬೀಳುವಂತೆ ಕಾಣುತ್ತಿದೆ.
ಹೌದು… ಯಡಿಯೂರಪ್ಪ ಅವರ ಎರಡು ವರ್ಷಗಳ ಹಳೆಯ ಪ್ರಕರಣ ಆಪ್ತ ಡೈರಿಯನ್ನು ಕೆದಕುವ ಮೂಲಕ ಕಾಂಗ್ರೆಸ್ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದು, ಅದು ಬಹುತೇಕ ನಕಲಿ ಎಂದು ಮೇಲ್ನೋಟಕ್ಕೆ ಸಾಬೀತಾಗುತ್ತಿದ್ದು, ಇದೀಗ ಇದು ಕಾಂಗ್ರೆಸ್’ಗೆ ಮುಳುವಾಗುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಬಿಡುಗಡೆ ಮಾಡಿರುವ ಡೈರಿಯಲ್ಲೇನಿದೆ?
2017ರ ಆಗಸ್ಟ್ 2ರಂದು ಡಿ.ಕೆ. ಶಿವಕುಮಾರ್ ಅವರ ಮನೆ ಮೇಲೆ ಐಟಿ ರೇಡ್ ಮಾಡಿದಾಗ ಈ ದಾಖಲೆಗಳು ಸಿಕ್ಕಿದ್ದವು. 2009ರಲ್ಲಿ ಬರೆದಿದ್ದೆನ್ನಲಾದ ಶಾಸಕರ ಡೈರಿ ಇದಾಗಿದೆ. ಇದರಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಸೇರಿದಂತೆ ವಿವಿಧ ಜನರಿಗೆ ನೀಡಲಾಗಿದ್ದ ಹಣದ ವಿವರಗಳು ಈ ಡೈರಿಯಲ್ಲಿದ್ದವು. ಈ ಡೈರಿಯಲ್ಲಿದ್ದವು. ಒಟ್ಟು 1,800 ಕೋಟಿ ರೂ. ಹಣವನ್ನು ಸಲ್ಲಿಕೆ ಮಾಡಿರುವುದನ್ನು ನಮೂದಿಸಲಾಗಿದ್ದು, ಇದರಲ್ಲಿ ಯಡಿಯೂರಪ್ಪನವರ ಸಹಿ ಇದೆ ಎಂದು ಹೇಳಲಾಗಿದೆ.
ಈ ಆರೋಪಕ್ಕೆ ಸ್ವತಃ ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಪ್ರತಿಕ್ರಿಯಿಸಿದ್ದು ಪ್ರಕರಣದಲ್ಲಿ ಸರಿಯಾದ ಸ್ಪಷ್ಟತೆ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ಈಗ ಮೂಡುತ್ತಿರುವ ಪ್ರಶ್ನೆಗಳು?
- ಕಾಂಗ್ರೆಸ್ ಹೇಳುತ್ತಿರುವ ಈ ಡೈರಿಯ ಮೊದಲನೆಯದಾಗಿ ಮೂಲಪ್ರತಿಯಲ್ಲ?
- ಡಿಕೆಶಿ ಮನೆಯಲ್ಲಿ ಸಿಕ್ಕ ಈ ಡೈರಿ ಎಲ್ಲಿಂದ ಬಂತು?
- ಇಲ್ಲಿಗೆ ಹೇಗೆ ಬಂತು ಎಂಬುದು ಗೊತ್ತಾಗಿಲ್ಲ?
- ಇದರ ಮೂಲ ಪ್ರತಿ ಎಲ್ಲಿದೆ ಎಂಬುದೂ ಗೊತ್ತಿಲ್ಲ?
- ಡೈರಿಯಲ್ಲಿರುವ ಹಸ್ತಾಕ್ಷತವೂ ಯಡಿಯೂರಪ್ಪನವರದ್ದೇ ಎಂಬುದಕ್ಕೆ ಪುರಾವೆಗಳಿಲ್ಲ.
ಇದಲ್ಲದೇ ಡೈರಿಯ ಮೂಲ ಪ್ರತಿ ಸಿಗದೇ ಈ ಪ್ರಕರಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಐಟಿ ಇಲಾಖೆ ಎಂದು ಹೇಳುತ್ತಿದೆ.
ಇನ್ನು ಚುನಾವಣೆಯ ಬಿಜೆಪಿಯನ್ನು ಹಣಿಯಲು ಈ ಅಸ್ತ್ರವನ್ನು ಬಳಸಿಕೊಳ್ಳಲು ಮುಂದಾದ ಕಾಂಗ್ರೆಸ್ ಈಗ ತಾನೇ ತೋಡಿದ ಗುಂಡಿಯಲ್ಲಿ ತಾನೇ ಬಿದ್ದು ಒದ್ದಾಡುತ್ತಿದೆಯಾ ಎಂಬ ಅನುಮಾನಗಳು ಮೂಡುತ್ತಿವೆ.

















