2002ನೇ ಸಾಲಿನಲ್ಲಿ ಗೋಧ್ರಾ ಹತ್ಯಾಕಾಂಡ ಹಾಗೂ ಅನಂತರ ನಡೆದ ಗಲಭೆಯು ದುರ್ದೈವಿ ಘಟನೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ! ಅಂದರೆ ಅದಾದ ಬಳಿಕ ಕಾಂಗ್ರೆಸ್ ಪಕ್ಷವು ಗುಜರಾತ್ ಎಂದರೆ ‘ಹಿಂದುತ್ವದ ಪ್ರಯೋಗಶಾಲೆ, ಎಂಬಂತೆ ಹೇಳಲು ಪ್ರಾರಂಭಿಸಿತು. ಹಿಂದುತ್ವಕ್ಕೆ ಎಷ್ಟು ಸಾಧ್ಯವೋ ಅಷ್ಟು ಮಸಿ ಬಳಿಯಲು ಪ್ರಯತ್ನಿಸಿತು. ಆದರೆ ಈಗಿನ ಚಿತ್ರಣ ಬೇರೆಯಾಗಿದೆ. ಈಗ ಇದೇ ಕಾಂಗ್ರೆಸ್ ನಾಮಶೇಷವಾಗುವ ಮಾರ್ಗದಲ್ಲಿದೆ. ರಾಜ್ಯದಲ್ಲಿ ಹೇಗೋ ಅಂಕಿ-ಸಂಖ್ಯೆ ಜೋಡಿಸಿಕೊಂಡು ಅಧಿಕಾರ ಸ್ಥಾಪಿಸಿದೆ.
ಕಾಂಗ್ರೆಸ್‌ಗೆ ಮತ್ತೊಮ್ಮೆ ಮುಖ್ಯ ರಾಜಕಾರಣಕ್ಕೆ ಬರಬೇಕಾಗಿದೆ. ದೇಶದಲ್ಲಿನ 29 ರಾಜ್ಯಗಳ ಪೈಕಿ ಅಧಿಕಾರ ಕ್ಷೇತ್ರವಿರುವ ದೊಡ್ಡ ರಾಜ್ಯವೆಂದರೆ ಕೇವಲ ಕರ್ನಾಟಕ, ಅದೊಂದೇ ಕಾಂಗ್ರೆಸ್ಸಿನ ಕೈಯಲ್ಲಿ ಬಾಕಿ ಉಳಿದಿದೆ! ಈ ಹಿನ್ನೆಲೆಯಲ್ಲಿ 2019 ರ ಸಿದ್ಧತೆ ಮಾಡುವ ನಿಟ್ಟಿನಿಂದ ಅದು ಹಿಂದುದ್ವೇಷದ ರಾಜಕಾರಣ ಮಾಡಲು ಪ್ರಾರಂಭಿಸಿದೆ ಎಂದು ಯಾರಿಗಾದರೂ ಅನಿಸಬಹುದು.
ಇದರ ಕಾರಣವೆಂದರೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಏಕಾಏಕಿ ಕನಸು ಬೀಳುವಂತೆ ರಾಜ್ಯದ ಪೋಲೀಸರು ಹಿಂದುತ್ವವಾದಿಗಳನ್ನು ಬಂಧಿಸಲು ಪ್ರಾರಂಭಿಸಿದರುವುದು ಒಂದು ರೀತಿಯಲ್ಲಿ ಅರ್ಥವಿಲ್ಲದಂತೆ ಕಾಣಿಸುತ್ತದೆ. ಈ ಬಂಧನದ ಸಮಯವು (ಟೈಮಿಂಗ್) ಕಾಂಗ್ರೆಸ್ಸಿನ ರಾಜಕಾರಣಕ್ಕೆ ಒಂದು ರೀತಿಯಲ್ಲಿ ಅನುಕೂಲವಾಗಿದೆ. ಆದ್ದರಿಂದ ರಾಜ್ಯವು ಹಿಂದುದ್ವೇಷದ ಪ್ರಯೋಗಶಾಲೆಯಾಗಿದೆಯೇನೋ, ಎಂಬಂತೆ ಕಾಣಿಸುತ್ತದೆ. ಅಂದರೆ ಸತ್ಯವನ್ನು ಎಂದಿಗೂ ಮುಚ್ಚಿಡಲು ಸಾಧ್ಯವಿಲ್ಲ. ಸತ್ಯವನ್ನು ಎಷ್ಟೇ ಮುಚ್ಚಿಟ್ಟರೂ ಅದು ಒಂದಲ್ಲ ಒಂದು ದಿನ ಸೂರ್ಯನ ಹಾಗೆ ಸ್ಪಷ್ಟವಾಗಿ ಮೇಲೆ ಬರುತ್ತದೆ. ಹಿಂದೂಗಳ ನಿರಪರಾಧಿತನವು ಮುಂಬರುವ ಕಾಲವೇ ಹೇಳಲಿದೆ !
-ಸೋಮಶೇಖರ್,
ಶಿವಮೊಗ್ಗ
Discussion about this post