ಬೆಂಗಳೂರು: ರಾಜ್ಯ ಮೈತ್ರಿ ಸರ್ಕಾರದಲ್ಲಿ ಪಾಲುದಾರಿಕೆ ಹೊಂದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಲೋಕಸಭಾ ಚುನಾವಣೆಯ ಮೈತ್ರಿಯನ್ನೂ ಮುಂದುವರೆಸಿದ್ದು, ಸೀಟು ಹಂಚಿಕೆ ಮಾಡಿಕೊಂಡಿವೆ.
ವಿಧಾನಸಭೆಯಲ್ಲಿ ಹೆಚ್ಚು ಸ್ಥಾನ ಹೊಂದಿರುವ ಕಾಂಗ್ರೆಸ್ 20 ಕ್ಷೇತ್ರಗಳನ್ನು ಪಡೆದುಕೊಳ್ಳುವ ಮೂಲಕ ಸಿಂಹ ಪಾಲು ಪಡೆದಿದ್ದರೆ, ಜೆಡಿಎಸ್ 8 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ.
Karnataka:Congress and JDS seat sharing done. Congress to contest on 20 seats and JD(S) to contest on 8 seats out of the 28 Lok Sabha seats pic.twitter.com/HmkD4esdYT
— ANI (@ANI) March 13, 2019
ಶಿವಮೊಗ್ಗ, ತುಮಕೂರು, ಹಾಸನ, ಮಂಡ್ಯ, ಬೆಂಗಳೂರು ಉತ್ತರ ಹಾಗೂ ವಿಜಯಪುರ, ಚಿಕ್ಕಮಗಳೂರು, ಉತ್ತರ ಕನ್ನಡ ಕ್ಷೇತ್ರಗಳನ್ನು ಪಡೆದುಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ.
ಒಟ್ಟು 28 ಸ್ಥಾನಗಳಲ್ಲಿ 20 ಸ್ಥಾನ ಪಡೆದಿರುವ ಕಾಂಗ್ರೆಸ್’ನ್ನು ಜೆಡಿಎಸ್ ಬೆಂಬಲಿಸಲಿದ್ದು, ಉಳಿದ 8 ಸ್ಥಾನಗಳಲ್ಲಿ ಜೆಡಿಎಸ್’ಗೆ ಕೈ ಬೆಂಬಲಿಸಲಿದೆ.
ಆದರೆ, ಪ್ರತಿಪಕ್ಷ ಬಿಜೆಪಿ 28 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಏಕಾಂಗಿಯಾಗಿ ಹೋರಾಡಲಿದೆ.
Discussion about this post