ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದಲ್ಲಿ ವಕ್ಫ್ ಮಂಡಳಿಗೆ ನಿಯಂತ್ರಣ ಹೇರುವ ಮಹತ್ವದ ವಕ್ಫ್(ತಿದ್ದುಪಡಿ) ಮಸೂದೆಗೆ #WaqfAmendmentBill ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಜಂಟಿ ಸಂಸದೀಯ ಸಮಿತಿ (ಜೆಪಿಸಿ) #JointParliamentaryCommittee ಇತ್ತೀಚೆಗೆ ಶಿಫಾರಸು ಮಾಡಿದ ಬದಲಾವಣೆಗಳನ್ನು ಒಳಗೊಂಡ ವಕ್ಫ್(ತಿದ್ದುಪಡಿ) ಮಸೂದೆಗೆ ತಿದ್ದುಪಡಿಗಳನ್ನು ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದಿಸಿದೆ.
Also Read>> ಜಮ್ಮು – ಕಾಶ್ಮೀರ | ಸೇನಾ ವಾಹನದ ಮೇಲೆ ಗುಂಡಿನ ದಾಳಿ
ಮಾರ್ಚ್ 10 ರಿಂದ ಏಪ್ರಿಲ್ 4 ರವರೆಗೆ ನಡೆಯಲಿರುವ ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ಈ ಮಸೂದೆಯನ್ನು ಚರ್ಚೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಲಾಗುವುದು ಎಂದು ವರದಿಯಾಗಿದೆ.
ಬಜೆಟ್ ಅಧಿವೇಶನದ ಮೊದಲ ಭಾಗವು ಜನವರಿ 31 ರಿಂದ ಫೆಬ್ರವರಿ 13 ರವರೆಗೆ ನಡೆಯಿತು.
ಫೆಬ್ರವರಿ 19 ರಂದು ನಡೆದ ಸಭೆಯಲ್ಲಿ ಜೆಪಿಸಿ #JPC ಮಾಡಿದ 14 ಬದಲಾವಣೆಗಳನ್ನು ಸಂಪುಟ ಅಂಗೀಕರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಐಎಎನ್’ಎಸ್ ವರದಿ ಮಾಡಿದೆ. ವಕ್ಫ್ (ತಿದ್ದುಪಡಿ) ಮಸೂದೆಯು ಕೇಂದ್ರ ಮತ್ತು ರಾಜ್ಯ ವಕ್ಫ್ ಮಂಡಳಿಗಳನ್ನು ನಿಯಂತ್ರಿಸುವ ಕಾನೂನುಗಳಿಗೆ 44 ಬದಲಾವಣೆಗಳನ್ನು ಪ್ರಸ್ತಾಪಿಸಿದೆ.
Also Read>> ಶಿವಮೊಗ್ಗ | ನಗರದೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ
ಬಿಜೆಪಿ ನಾಯಕ ಜಗದಾಂಬಿಕಾ ಪಾಲ್ ನೇತೃತ್ವದ ಜೆಪಿಸಿ, ಪ್ರತಿಪಕ್ಷಗಳ ಭಿನ್ನಾಭಿಪ್ರಾಯದ ನಡುವೆ ಶಾಸನಕ್ಕೆ ಹಲವು ತಿದ್ದುಪಡಿಗಳನ್ನು ಸೂಚಿಸಿದೆ. ಕಳೆದ ಜನವರಿಯಲ್ಲಿ ಜೆಪಿಸಿ ಸಭೆಯಲ್ಲಿ ಪ್ರತಿಪಕ್ಷ ಸಂಸದರು ಸೇರಿ ಇತರರು 44 ತಿದ್ದುಪಡಿಗಳಿಗೆ ಸೂಚಿಸಿದರು. ಈ ಪೈಕಿ ಬಿಜೆಪಿ ನೇತೃತ್ವದ ಎನ್’ಡಿಎ ಸದಸ್ಯರು ಪ್ರಸ್ತಾಪಿಸಿದ 14 ತಿದ್ದುಪಡಿಗಳನ್ನು ಮಾತ್ರವೇ ಜಂಟಿ ಸಂಸದೀಯ ಸಮಿತಿ ಅಂಗೀಕರಿಸಿತು. ಮುಸ್ಲಿಮೇತರರು ಮತ್ತು (ಕನಿಷ್ಠ ಇಬ್ಬರು) ಮಹಿಳಾ ಸದಸ್ಯರನ್ನು ವಕ್ಫ್ ಮಂಡಳಿಗೆ ನಾಮನಿರ್ದೇಶನ ಮಾಡುವುದು ಸೇರಿದಂತೆ ಈ ಪ್ರಸ್ತಾಪಗಳು ವಿರೋಧ ಪಕ್ಷಗಳಿಂದ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ಪರಿಚಯಿಸಿದ ನಂತರ ಆಗಸ್ಟ್ 2024 ರಲ್ಲಿ ಮಸೂದೆಯನ್ನು ಜೆಪಿಸಿಗೆ ಉಲ್ಲೇಖಿಸಲಾಗಿತ್ತು.
ಸಂಸದೀಯ ಸಮಿತಿಯು ವರದಿಯನ್ನು ಬಹುಮತದ ಮತಗಳಿಂದ ಅಂಗೀಕರಿಸಿತು. ಆದರೆ ಸಮಿತಿಯಲ್ಲಿರುವ ಪ್ರತಿಪP್ಷÀಗಳ ಎಲ್ಲಾ 10 ಸಂಸದರು ವರದಿಯನ್ನು ಆಕ್ಷೇಪಿಸಿದ್ದರು. ಅವರು ಭಿನ್ನಾಭಿಪ್ರಾಯ ಟಿಪ್ಪಣಿಗಳನ್ನು ಸಹ ಮಂಡಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಗದಾಂಬಿಕಾ ಪಾಲ್ ನೇತೃತ್ವದ ಜೆಪಿಸಿ ಶಿಫಾರಸು ಮಾಡಿದ ಹೆಚ್ಚಿನ ಬದಲಾವಣೆಗಳನ್ನು ಸೇರಿಸಿಕೊಂಡಿದೆ ಮತ್ತು ಕಳೆದ ವಾರ ಭಾರತೀಯ ಬಂದರು ಮಸೂದೆಯೊಂದಿಗೆ ಸಂಪುಟವು ಅದನ್ನು ಅಂಗೀಕರಿಸಿದೆ ಎಂದು ಮೂಲಗಳು ತಿಳಿಸಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post