ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸನಗರ: ತೋಟಗಾರಿಕಾ ಇಲಾಖೆಯ ಅಡಿಯಲ್ಲಿನ ಸಹಾಯ ಹಾಗೂ ಸಹಕಾರ ಪಡೆದು ಉತ್ತಮ ಕೃಷಿ ಇಳುವರಿ ತೆಗೆಯುವ ಮೂಲಕ ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಿ ಎಂದು ಶಾಸಕ ಎಚ್. ಹಾಲಪ್ಪ ರೈತರಿಗೆ ಕರೆ ನೀಡಿದರು.
ತಾಲೂಕಿನ ಜೇನಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ತೋಟಗಾರಿಕಾ ಗಿಡಗಳ ವಿತರಣೆ ಮಾಡಿ ಅವರು ಮಾತನಾಡಿದರು.
ಇಲಾಖೆ ವತಿಯಿಂದ ನೀಡುತ್ತಿರುವ ವಿವಿಧ ತಳಿಯ ಗಿಡಗಳನ್ನು ಶಾಸಕರು ವಿತರಣೆ ಮಾಡಿದರು.
ಧ್ವಜಸ್ಥಂಬ ನಿರ್ಮಾಣ ಕಾಮಗಾರಿ ಪರಿಶೀಲಿನೆ
ಸಾಗರದ ಗಣಪತಿ ಕೆರೆ ಪಕ್ಕದಲ್ಲಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಉದ್ಯಾನವನ ಹಾಗೂ 150 ಅಡಿ ಎತ್ತರದ ತ್ರಿವರ್ಣ ಧ್ವಜಸ್ಥಂಬ ನಿರ್ಮಾಣ ಕಾಮಗಾರಿ ಸ್ಥಳ ಪರಿಶೀಲಿಸಿದರು.
ಕಾಂಕ್ರಿಟ್ ರಸ್ತೆ ಕಾಮಗಾರಿ ಪರಿಶೀಲಿನೆ
ಪುರಪ್ಪೆಮನೆ ಬಸ್ ನಿಲ್ದಾಣದಿಂದ ಅಪ್ಪೆಮನೆ ಎಸ್.ಸಿ ಕಾಲೋನಿ ಮುಖಾಂತರ ಬಿಲ್ಗೊಡಿ ಸಂಪರ್ಕಿಸುವ 150 ಲಕ್ಷ ರೂ ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿ ಸ್ಥಳ ಪರಿಶೀಲಿಸಿ, ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ತಾ.ಬಿಜೆಪಿ ಅಧ್ಯಕ್ಷರಾದ ಗಣಪತಿ ಬಿಳಗೋಡು, ರಾಘವೇಂದ್ರ ಕಲ್ಕೊಪ್ಪ, ಅರುಣ್ ಕುಮಾರ್, ಎ.ಎನ್. ಪ್ರಕಾಶ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಜೀವನ ಶೈಲಿಯ ಪೇಯ ಉತ್ಪನ್ನ ಘಟಟ ಆರಂಭಿಸಲು ಮನವಿ
ಮಲೆನಾಡು ಭಾಗದಲ್ಲಿ ರೈತರು ಕಲ್ಲಂಗಡಿ, ಅನಾನಸ್, ಶುಂಠಿ, ಕಾಳು ಮೆಣಸು ಇನ್ನಿತರ ಬೆಳೆಗಳನ್ನು ಏತೇಚ್ಛವಾಗಿ ಬೆಳೆಯುತ್ತಾರೆ. ಜೇನನ್ನು ಮೂಲ ಪದಾರ್ಥವನ್ನಾಗಿ ಬಳಸಿಕೊಂಡು ರೈತರು ಬೆಳೆಯುವ ಹಣ್ಣುಗಳಿಂದ, ಜೀವನ ಶೈಲಿ ಪೇಯ (ವೈನ್) ತಯಾರಿಕಾ ಘಟಕವನ್ನು ಸ್ಥಾಪಿಸುವುದರಿಂದ ಉದ್ಯಮಿಗಳಿಗೆ ಪ್ರೋತ್ಸಾಹ ಸಿಗುವುದರೊಂದಿಗೆ, ರೈತರ ಬೆಳೆಗಳಿಗೆ ಬೇಡಿಕೆ ಬರುತ್ತದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಶಾಸಕ ಎಚ್. ಹಾಲಪ್ಪ ಮನವರಿಕೆ ಮಾಡಿಕೊಟ್ಟರು.
ಈ ಕುರಿತಂತೆ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು, ಮಹಾರಾಷ್ಟ್ರದಲ್ಲಿ ಈ ಘಟಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು. ದೇಶ-ವಿದೇಶಗಳಲ್ಲಿ ಗುಣಮಟ್ಟದ ಮಿಡ್ ಗೆ ಬೇಡಿಕೆ ಇರುವುದರಿಂದ ರೈತರ ಬೆಳಿಗಳಿಗೆ ಉತ್ತಮ ದರ ಹಾಗೂ ಪ್ರದಾನ ಮಂತ್ರಿ ನರೇಂದ್ರ ಮೋದಿಯವರ 2022 ರೊಳಗೆ ರೈತರ ಆದಾಯ ದ್ವಿಗುಣ ಗೊಳಿಸುವ ಆಶಯ ಪೂರ್ಣಗೊಳ್ಳುವುದಕ್ಕೆ ಸಹಕಾರಿಯಾಗಲಿದೆ ಎಂದರು.
Get In Touch With Us info@kalpa.news Whatsapp: 9481252093
Discussion about this post