ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ದೇಶದಾದ್ಯಂತ ಮಾರಕ ಕೊರೋನಾ ವೈರಸ್ ಸಾಲು ಸಾಲು ಬಲಿ ಪಡೆಯುತ್ತಿರುವಂತೆಯೇ, ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಜನರಲ್ಲಿ ಜಾಗೃತಿ ಮೂಡುವುದೇ ಮಹತ್ವದ ಹಂತವಾಗಿದೆ.
ಈ ಹಿನ್ನೆಲೆಯಲ್ಲಿ ನಾಗರಿಕರಲ್ಲಿ ಕೊರೋನಾ ವೈರಸ್ ಕುರಿತು ನಗರದ ವಿವಿಧ ಬಡಾವಣೆಗಳ ರಸ್ತೆ, ಗೋಡೆಗಳ ಮೇಲೆ ಗುರು ಮತ್ತಿತರ ಚಿತ್ರಕಲಾವಿದರ ತಂಡ ವರ್ಣರಂಜಿತವಾಗಿ ಬೃಹದಕಾರದಲ್ಲಿ ಕೊರೋನಾ ವೈರಸ್ ಚಿತ್ರವನ್ನು ಬರೆದು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ನಗರದ ಹಲವು ಭಾಗಗಳಲ್ಲಿ ಪ್ರಮುಖ ರಸ್ತೆ, ಗೋಡೆ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರ-ಜಾಗೃತಿ ಸಂದೇಶ ಬರೆಯುವ ಮೂಲಕ ದೇಶ ಸೇವೆ ಮಾಡುತ್ತಿದ್ದಾರೆ.
Get in Touch With Us info@kalpa.news Whatsapp: 9481252093

















