ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಈಗಾಗಲೇ ಜಿಲ್ಲೆಯಲ್ಲಿ ಆತಂಕ ಮೂಡಿಸಿರುವ ಕೊರೋನಾ ವೈರಸ್ ಮತ್ತಷ್ಟು ಕೇಕೆ ಹಾಕಿದ್ದು, ಇಂದು ಒಂದೇ ದಿನ ಶಿವಮೊಗ್ಗದಲ್ಲಿ 10 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಎಲ್ಲ ದೃಶ್ಯ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇಂದು 10 ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ ಎಂಬುದು ಬಹುತೇಕ ಖಚಿತವೇ ಎನ್ನಲಾಗಿದ್ದರೂ, ಅಧಿಕೃತ ಮೂಲಗಳು ಮಾತ್ರ ದೃಢಪಡಿಸಿಲ್ಲ.
ಈ ಕುರಿತಂತೆ ಕೊರೋನಾ ರೋಗಿಗಳದ್ದು ಎಂದು ಹೇಳಲಾಗಿರುವ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಂತೆ, ಮುಂಬೈ ಟ್ರಾವೆಲ್ ಹಿಸ್ಟರಿ ಹೊಂದಿರುವ ತೀರ್ಥಹಳ್ಳಿ ತಾಲೂಕಿನ ರೋಗಿ ಸಂಖ್ಯೆ 8002, 8006, 8007, 8143, ಆಂಧ್ರಪ್ರದೇಶ ಟ್ರಾವೆಲ್ ಹಿಸ್ಟರಿ ಹೊಂದಿರುವ ಶಿವಮೊಗ್ಗ ನಗರದ ರೋಗಿ ಸಂಖ್ಯೆ 8008, ಕೇರಳ ಟ್ರಾವೆಲ್ ಹಿಸ್ಟರಿ ಹೊಂದಿರುವ ಶಿವಮೊಗ್ಗ ನಗರದ ರೋಗಿ ಸಂಖ್ಯೆ 8145 ಹಾಗೂ 8147 ಆಗಿದ್ದರೆ, ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿರದ ಶಿವಮೊಗ್ಗ ತಾಲೂಕಿನ ಬಾಳೆಕೊಪ್ಪದ ರೋಗಿ ಸಂಖ್ಯೆ 8147 ಹಾಗೂ ಶಿಕಾರಿಪುರ ತಾಲೂಕಿನ ರೋಗಿ ಸಂಖ್ಯೆ 8146 ಎಂದು ಹೇಳಲಾಗಿದೆ.
ಇದಿಷ್ಟು ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರುವ ಸುದ್ದಿಯಾಗಿದ್ದು, ಈ ಕುರಿತಂತೆ ಜಿಲ್ಲಾಧಿಕಾರಿಗಳಾಗಲಿ ಅಥವಾ ಆರೋಗ್ಯ ಇಲಾಖೆಯಾಗಲಿ ನಿಖರ ಮಾಹಿತಿ ಪ್ರಕಟಿಸಿ, ಸ್ಪಷ್ಟೀಕರಣ ನೀಡಬೇಕಿದೆ.
Get in Touch With Us info@kalpa.news Whatsapp: 9481252093
Discussion about this post