ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯ ದ್ವಿತೀಯ ಪಿಯುಪಿ ಪರೀಕ್ಷೆಯನ್ನು ರಾಜ್ಯ ಸರ್ಕಾರ ಮುಂದೂಡಿದೆ.
ಈ ಕುರಿತಂತೆ ಮಾತನಾಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ವೈದ್ಯಕೀಯ ಇಲಾಖೆಯ ಸಲಹೆ ಮೇರೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಸಿಎಂ ಅವರ ಸೂಚನೆಯಂತೆ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಪರಿಸ್ಥಿತಿ ನೋಡಿಕೊಂಡು ಮುಂದಿನ ದಿನಾಂಕ ನಿಗದಿಪಡಿಸಿ, ತಿಳಿಸಲಾಗುವುದು ಎಂದಿದ್ದಾರೆ.
ಪರೀಕ್ಷೆಗಳಿಗೆ ಸಿದ್ದತೆ ಮುಕ್ತಾಯಗೊಳಿಸಿರುವ ವಿದ್ಯಾರ್ಥಿಗಳು ಇದರಿಂದಾಗಿ ಹತಾಷರಾಗುವ ಅಗತ್ಯವಿಲ್ಲ. ಇದೊಂದು ತುರ್ತು ಅನಿವಾರ್ಯ ಪರಿಸ್ಥಿತಿಯಾಗಿದ್ದು, ನಿಮ್ಮ ಹಿತಕ್ಕಾಗಿಯೇ ಈ ನಿರ್ಧಾರ ಕೈಗೊಂಡಿದ್ದೇವೆ. ಇದನ್ನು, ಮುಂದವರೆಸಿರುವ ಅಧ್ಯಯನ ರಜೆ ಎಂದು ತಿಳಿದುಕೊಂಡು ಇನ್ನೂ ಹೆಚ್ಚಿನ ತಯಾರಿ ನಡೆಸಿ ಎಂದು ಸಚಿವರು ಕೋರಿದ್ದಾರೆ.
Get in Touch With Us info@kalpa.news Whatsapp: 9481252093

















