No Result
View All Result
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು
English Articles

A Second Chance at Life Through Deceased Organ Donation

by ಕಲ್ಪ ನ್ಯೂಸ್
February 3, 2026
0

Kalpa Media House  |  Bengaluru, Whitefield  | For 48-year-old Unnikrishnan, life for several years revolved around dialysis sessions, medications, and...

Read moreDetails
Bhaskara Parva: Generations of Journalism Students Reunite to Honour a Teacher Who Shaped Their Lives

Bhaskara Parva: Generations of Journalism Students Reunite to Honour a Teacher Who Shaped Their Lives

February 2, 2026
NITK Surathkal Inaugurates First Annual Sports Festival- ‘Endeavor 2026’

NITK Surathkal Inaugurates First Annual Sports Festival- ‘Endeavor 2026’

February 1, 2026
Samsung Sets Two Guinness World Records with its India

Samsung Sets Two Guinness World Records with its India

January 31, 2026
ಮೈಸೂರು | ಮಹಾರಾಣಿ ಮಹಿಳಾ ವಿದ್ಯಾರ್ಥಿನಿಯರಿಗೆ ಆಹಾರ ಹಾಗು ಆತಿಥ್ಯೋದ್ಯಮ ಕೌಶಲ್ಯ ತರಬೇತಿ

Maharani’s Science College Collaboration Empowers Students with Industry-Ready Skills

January 31, 2026
  • Advertise With Us
  • Grievances
  • About Us
  • Contact Us
Friday, February 6, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಕರೋನಾ ವೈರಸ್ ಭೀತಿ: ಮಾಸ್ಕ್‌, ಸ್ಯಾನಿಟೈಸರ್’ಗೆ ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಬೇಡಿಕೆ!

ಹೋಲ್’ಸೇಲ್ ಮಾರಾಟಗಾರರಿಂದ ಕೃತಕ ಅಭಾವ ಸೃಷ್ಠಿ? ಜಿಲ್ಲಾಧಿಕಾರಿಗಳೇ ಒಮ್ಮೆ ಇತ್ತ ಗಮನಹರಿಸಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 5, 2020
in ಶಿವಮೊಗ್ಗ
0
ಕರೋನಾ ವೈರಸ್ ಭೀತಿ: ಮಾಸ್ಕ್‌, ಸ್ಯಾನಿಟೈಸರ್’ಗೆ ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಬೇಡಿಕೆ!

Representational Image

Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶಿವಮೊಗ್ಗ: ವಿಶ್ವದ ಹಲವು ಭಾಗಗಳಲ್ಲಿ ಸಾವಿರಾರು ಮಂದಿಯನ್ನು ಬಲಿ ಪಡೆದು, ಭಾರತಕ್ಕೂ ಕಾಲಿಟ್ಟಿರುವ ಮಾರಕ ಕರೋನಾ ವೈರಸ್ ಭೀತಿ ಜಿಲ್ಲೆಗೂ ಕಾಲಿಟ್ಟಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಶಿವಮೊಗ್ಗ, ಭದ್ರಾವತಿ, ಸೇರಿದಂತೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಹಾಗೂ ದಾವಣಗೆರೆ ಜಿಲ್ಲೆಗೆ ಸೇರಿದ ಹೊನ್ನಾಳಿಯಲ್ಲೂ ಸಹ ಕರೋನಾ ಭೀತಿ ಸೃಷ್ಠಿಸಿದ್ದು, ಈ ಹಿನ್ನೆಲೆಯಲ್ಲಿ ಮೂಗು ಮುಚ್ಚಿಕೊಳ್ಳುವ ಕ್ಲಿನಿಕಲ್ ಮಾಸ್ಕ್‌ ಹಾಗೂ ಸ್ಯಾನಿಟೈಸರ್’ಗೆ ಭಾರೀ ಬೇಡಿಕೆ ಕಂಡು ಬಂದಿದೆ.

ಜಿಲ್ಲಾ ಕೇಂದ್ರ ಶಿವಮೊಗ್ಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಾಸ್ಕ್‌ ಹಾಗೂ ಹ್ಯಾಂಡ್ ಸ್ಯಾನಿಟೈಸರ್’ಗಳ ಬೇಡಿಕೆ ಹೆಚ್ಚಾಗಿದ್ದು, ಹಲವು ಮೆಡಿಕಲ್ ಶಾಪ್’ಗಳಲ್ಲಿ ಇದರ ಮಾರಾಟ ಸಾಮಾನ್ಯಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚಾಗಿದೆ.


ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಾಮಾನ್ಯವಾಗಿ ಜನಸಾಮಾನ್ಯರು ಮಾಸ್ಕ್‌ ಬಳಸುವುದು ಕಡಿಮೆಯೇ. ಹೀಗಾಗಿ, ಇದರ ಮಾರಾಟವೂ ಸಹ ತೀರಾ ಕಡಿಮೆಯೇ. ಆದರೆ, ಕರೋನಾ ಕುರಿತಾಗಿ ಜಿಲ್ಲೆಯಲ್ಲಿ ಅನಗತ್ಯ ಆತಂಕದ ಮಾಹಿತಿ ಸೃಷ್ಠಿಯಾಗಿರುವ ಹಿನ್ನೆಲೆಯಲ್ಲಿ ಮಾಸ್ಕ್‌ ಹಾಗೂ ಹ್ಯಾಂಡ್ ಸ್ಯಾನಿಟೈಸರ್’ಗೆ ಭಾರೀ ಬೇಡಿಕೆ ಬಂದಿದೆ.

ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಶಿವಮೊಗ್ಗದ ರಾಯಲ್ ಮೆಡಿಕಲ್ಸ್‌’ನ ಲೋಹಿತ್, ಒಂದಷ್ಟು ಬೇಡಿಕೆಯಿರುವುದು ಹೌದು. ಆದರೆ, ಈಗ ಹಲವು ಶಾಲೆಗಳಲ್ಲಿ ಮಕ್ಕಳಿಗೆ ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ಹೇಳಿರುವ ಕಾರಣ ಇದಕ್ಕೆ ಮಕ್ಕಳಿಂದಲೇ ಹೆಚ್ಚಿನ ಬೇಡಿಕೆಯಿದೆ. ಇನ್ನು, ಕ್ಲಿನಿಕಲ್ ಮಾಸ್ಕ್‌’ಗೆ ಸಾಮಾನ್ಯಕ್ಕಿಂತಲೂ ಕೊಂಚ ಹೆಚ್ಚಿನ ಬೇಡಿಕೆಯಿದ್ದರೂ, ತೀರಾ ಹೆಚ್ಚಾಗಿದೆ ಎಂದು
ಹೇಳಲಾಗುವುದಿಲ್ಲ ಎನ್ನುತ್ತಾರೆ.

ಪ್ರಮುಖವಾಗಿ ಕೈಗಾರಿಕಾ ಪ್ರದೇಶಗಳಲ್ಲಿ ಬಳಸಲಾಗುವ ಎನ್ 1 ಮಾಸ್ಕ್‌’ಗಳನ್ನು ಹೆಚ್ಚಿನ ಜನ ಕೇಳುತ್ತಿದ್ದು, ಇದರ ಬೆಲೆ ತೀರಾ ಹೆಚ್ಚಾಗಿರುವ ಕಾರಣ ಕೊಳ್ಳುವವರು ಇಲ್ಲ. ಇದರ ಹೊರತಾಗಿ ಕೆಲವು ಮಂದಿ ಮಾತ್ರ ಕ್ಲಿನಿಕಲ್ ಮಾಸ್ಕ್‌ ಖರೀದಿ ಮಾಡುತ್ತಿದ್ದಾರೆ ಎನ್ನುತ್ತಾರೆ.

ತಮ್ಮ ಅಭಿಪ್ರಾಯ ಹಂಚಿಕೊಂಡ ಆರ್.ಆರ್. ಮೆಡಿಕಲ್ಸ್‌’ನ ಸಂಜೀವ್ ಅವರು, ನಗರದಲ್ಲಿ ಕರೋನಾ ವೈರಸ್ ಭೀತಿ ಹರಡಿರುವ ಹಿನ್ನೆಲೆಯಲ್ಲಿ ಕ್ಲಿನಿಕಲ್ ಮಾಸ್ಕ್‌’ಗೆ ಬೇಡಿಕೆ ಹೆಚ್ಚಾಗಿದೆ. ಇದರೊಂದಿಗೆ ಹ್ಯಾಂಡ್ ಸ್ಯಾನಿಟೈಸರ್ ಬಳಕೆಯೂ ಸಹ ಹೆಚ್ಚಾಗಿದ್ದು, ಇದನ್ನೂ ಹೆಚ್ಚಿನ ಮಂದಿ ಕೇಳುತ್ತಿದ್ದಾರೆ. ನಾವೂ ಸಹ ವೈರಸ್ ಬಾರದಂತೆ ಹೇಗೆ ಮುಂಜಾಗ್ರತೆ ವಹಿಸಬೇಕು ಎಂಬ ಕುರಿತಾಗಿ ಗ್ರಾಹಕರಲ್ಲಿ ಮಾಹಿತಿ ನೀಡುವ ಕಾರ್ಯ ಮಾಡುತ್ತಿದ್ದೇವೆ ಎನ್ನುತ್ತಾರೆ.

ಆರ್.ಆರ್. ಮೆಡಿಕಲ್ಸ್‌’ನ ಸಂಜೀವ್ ಅವರು ಕರೋನಾ ವೈರಸ್ ಕುರಿತು ಗ್ರಾಹಕರೊಬ್ಬರಿಗೆ ಜಾಗೃತಿ ಮೂಡಿಸುತ್ತಿರುವುದು

ಭದ್ರಾವತಿಯಲ್ಲಿ ಹೆಚ್ಚಿನ ಬೇಡಿಕೆ:
ಕರೋನಾ ವೈರಸ್ ಭೀತಿ ತಾಲೂಕು ಕೇಂದ್ರಗಳಲ್ಲೂ ಆತಂಕ ಸೃಷ್ಠಿಸಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ಮಾಸ್ಕ್‌ ಹಾಗೂ ಸ್ಯಾನಿಟೈಸರ್’ಗೆ ಭಾರೀ ಬೇಡಿಕೆ ಹೆಚ್ಚಾಗಿದೆ.

ಈ ಕುರಿತಂತೆ ಮಾತನಾಡಿದ ರಂಗಪ್ಪ ಸರ್ಕಲ್’ನ ಮಾರುತಿ ಮೆಡಿಕಲ್ಸ್‌ ಮಾಲೀಕರು, ಕರೋನಾ ಭೀತಿಯಿಂದಾಗಿ ನಗರದಲ್ಲಿ ಕಳೆದ 15 ದಿನದಿಂದಲೂ ಮಾಸ್ಕ್‌’ಗೆ ಬೇಡಿಕೆ ಹೆಚ್ಚಾಗಿದೆ. ಕಳೆದ 2 ವಾರದಲ್ಲಿ ಮೂರು ಲೇಯರ್’ನ 500ಕ್ಕೂ ಅಧಿಕ ಮಾಸ್ಕ್‌ ನಾವು ಮಾರಾಟ ಮಾಡಿದ್ದೇವೆ. ಇಂದು ಒಂದೇ ದಿನ ನಾವು 100ಕ್ಕೂ ಅಧಿಕ ಮಾಸ್ಕ್‌ ಮಾಡಿದ್ದೇವೆ. ಅಲ್ಲದೇ, ಒಂದು ವಾರದಿಂದ ಹ್ಯಾಂಡ್ ಸ್ಯಾನಿಟೈಸರ್’ಗೂ ಸಹ ಬೇಡಿಕೆ ಹೆಚ್ಚಾಗಿದ್ದು, ನಮ್ಮಲ್ಲಿ ಎರಡೂ ವಸ್ತುಗಳು ಖಾಲಿಯಾಗಿವೆ ಎನ್ನುತ್ತಾರೆ.


ಬೇಡಿಕೆ ಹೆಚ್ಚಾಗಿರುವ ಕಾರಣ ಬೆಲೆಯೂ ಸಹ ಹೆಚ್ಚಾಗಿದ್ದು, ಅಗತ್ಯಕ್ಕೆ ತಕ್ಕಂತೆ ಪೂರೈಕೆಯೂ ಸಹ ಇಲ್ಲವಾಗಿದೆ ಎನ್ನುತ್ತಾರೆ.

ಇನ್ನು, ಪ್ರತಿಷ್ಠಿತ ಅಪೋಲೋ ಮೆಡಿಕಲ್ಸ್‌’ನಲ್ಲಿ ನಮಗೆ ದೊರೆತ ಮಾಹಿತಿಯಂತೆ, 15 ದಿನದಿಂದ ಬೇಡಿಕೆ ಹೆಚ್ಚಾಗಿದ್ದು, ನಾಲ್ಕೈದು ದಿನದಿಂದ ಇದು ಮತ್ತಷ್ಟು ಅಧಿಕವಾಗಿದೆ. ಪ್ರಮುಖವಾಗಿ ಖಾಸಗಿ ಶಾಲೆಗಳಲ್ಲಿ ಮಕ್ಕಳು ಮಾಸ್ಕ್‌ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ತರಬೇಕು ಎಂದು ಹೇಳಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಪೋಷಕರೇ ಹೆಚ್ಚಾಗಿ ಕೇಳುತ್ತಿದ್ದಾರೆ. ಆದರೆ, ಬೇಡಿಕೆಗೆ ತಕ್ಕಂತೆ ಇವರಿಗೂ ಸಹ ಪೂರೈಕೆಯಿಲ್ಲ ಎಂದು ತಿಳಿದುಬಂದಿದೆ.

ಸ್ಟಾಕ್ ವ್ಯಾಪಾರಸ್ಥರ ಲಾಭಿ: ದುಪ್ಪಟ್ಟು ಬೆಲೆಗೆ ಮಾರಾಟ! ಕೃತಕ ಅಭಾವ ಸೃಷ್ಠಿ
ಕರೋನಾದ ಅನಗತ್ಯ ಭೀತಿಯಿಂದಾಗಿ ಜಿಲ್ಲೆಯಲ್ಲಿ ಕ್ಲಿನಿಕಲ್ ಮಾಸ್ಕ್‌ ಹಾಗೂ ಹ್ಯಾಂಡ್ ಸ್ಯಾನಿಟೈಸರ್’ಗೆ ಬೇಡಿಕೆ ಹೆಚ್ಚಾಗಿರುವ ಬೆನ್ನಲ್ಲೇ, ಇದರ ಹೋಲ್’ಸೇರ್ ಮಾರಾಟಗಾರರು ಕೃತಕ ಅಭಾವ ಸೃಷ್ಠಿಸಿದ್ದು, ಇದರು ರೀಟೈಲ್ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿ ಪರಿಣಮಿಸಿದೆ.

ಈ ಕುರಿತಂತೆ ಮಾರುಕಟ್ಟೆಯಲ್ಲಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಂಗ್ರಹಿಸಿರುವ ಮಾಹಿತಿಯಂತೆ, ಈ ಎರಡೂ ವಸ್ತುಗಳ ಬೇಡಿಕೆ ಹೆಚ್ಚಾದಂತೆ ಹೋಲ್’ಸೇರ್ ಮಾರಾಟಗಾರರು ಕೃತಕ ಅಭಾವ ಸೃಷ್ಠಿಸಿದ್ದು, ಅಗತ್ಯವಿರುವ ರೀಟೈಲ್ ಮಾರಾಟಗಾರರಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ದೊರಕಿದೆ.

ಸಾಮಾನ್ಯವಾಗಿ ಕ್ಲಿನಿಕಲ್ ಮಾಸ್ಕ್‌ ರೀಟೈಲ್ ಮಾರಾಟ ದರ 5 ರೂ. ಇರುತ್ತದೆ. ಇದನ್ನು ಹೋಲ್’ಸೇಲ್ ದರದಲ್ಲಿ ಖರೀದಿ ಮಾಡಿದರೆ 2.5 ರೂ.ನಿಂದ 3.5 ರೂ.ವರೆಗೂ ದೊರೆಯುತ್ತದೆ. ಆದರೆ, ಪ್ರಸ್ತುತ ರೀಟೈಲ್ ಮಾರಾಟಗಾರರಿಗೇ ಒಂದು ಮಾಸ್ಕ್‌’ಗೆ 10ರಿಂದ 20 ರೂ.ವರೆಗೂ ನೀಡುವಂತೆ ಹೋಲ್’ಸೇಲ್ ಮಾರಾಟಗಾರರು ಒತ್ತಡ ಹೇರುತ್ತಿದ್ದಾರೆ ಎಂಬ ಅಂಶ ದೊರೆತಿದೆ. ಹೀಗಾಗಿ, ರೀಟೈಲ್ ಮಾರಾಟದಲ್ಲಿ ಮಾಸ್ಕ್‌’ಗಳು 30ರಿಂದ 50 ರೂ.ಗಳವರೆಗೂ ಮಾರಾಟವಾಗುತ್ತಿದೆ.

ಜನರಲ್ಲಿನ ಆತಂಕವನ್ನು ಬಂಡವಾಳವನ್ನಾಗಿ ಮಾಡಿಕೊಂಡ ಹೋಲ್’ಸೇಲ್ ಮಾರಾಟಗಾರರು ಇಂತಹ ಕೃತ್ಯಕ್ಕೆ ಇಳಿದಿರುವುದನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.

ಜಿಲ್ಲೆಯಲ್ಲಿ ಕರೋನಾ ವೈರಸ್? ಜಿಲ್ಲಾಧಿಕಾರಿಗಳು ಹೇಳಿದ್ದೇನು?
ಜಿಲ್ಲೆಯಲ್ಲಿ ಇದುವರೆಗೆ ಕರೋನಾ ವೈರಸ್‌ನ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಶಂಕಿತ ವೈರಸ್ ಪೀಡಿತರ ಮೇಲೆ ನಿಗಾ ಇರಿಸಲಾಗಿದೆ. ಕರೋನಾ ವೈರಸ್ ಪೀಡಿತ ದೇಶಗಳಿಗೆ ಪ್ರವಾಸ ಕೈಗೊಂಡು ಜಿಲ್ಲೆಗೆ ಆಗಮಿಸಿರುವವರನ್ನು ಸೂಕ್ಷ್ಮ ನಿಗಾದಲ್ಲಿರಿಸಲಾಗಿದೆ. ಅವರಲ್ಲಿ ಕರೋನಾ ವೈರಸ್ ಪತ್ತೆಯಾಗಿರಿಸದಿದ್ದರೂ, ನಾಲ್ಕು ವಾರಗಳ ಕಾಲ ನಿಗಾದಲ್ಲಿರಿಸಲಾಗುವುದು. ಕರೋನಾ ವೈರಸ್ ಪತ್ತೆಯಾಗಿರುವ ದೇಶಗಳಿಗೆ ಸಧ್ಯಕ್ಕೆ ಪ್ರವಾಸ ಕೈಗೊಳ್ಳದಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ. ವಿದೇಶದಿಂದ ಆಗಮಿಸಿದ ವ್ಯಕ್ತಿಗಳಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಇತ್ಯಾದಿ ರೋಗ ಲಕ್ಷಣಗಳು ಕಂಡು ಬಂದರೆ ಸ್ವಯಂ ಚಿಕಿತ್ಸೆ ನಡೆಸದೆ ಆಸ್ಪತ್ರೆಗೆ ಬಂದು ದಾಖಲಾಗಬೇಕು.
ಆತಂಕ ಪಡುವ ಅಗತ್ಯವಿಲ್ಲ. ಕರೋನಾ ವೈರಸ್ ಹರಡದಂತೆ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕುರಿತು ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕರೋನಾ ವೈರಸ್ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ವದಂತಿಗಳನ್ನು ಹರಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
-ಕೆ.ಬಿ. ಶಿವಕುಮಾರ್, ಜಿಲ್ಲಾಧಿಕಾರಿಗಳು

(ವರದಿ: ಕೆ.ಎಸ್. ಸುಧೀಂದ್ರ, ಭದ್ರಾವತಿ)

Get in Touch With Us info@kalpa.news Whatsapp: 9481252093

Tags: Clinical MaskCorona VirusDHOHand SanitiserHealth News in KannadahospitalKannada News WebsiteLatestNewsKannadaMalnad NewsMedicalsShivamoggaShivamogga DC Sivakumarಕರೋನಾ ವೈರಸ್‌ಕ್ಲಿನಿಕಲ್ ಮಾಸ್ಕ್‌
Share204Tweet123Send
Previous Post

ಕೇವಲ 1 ಗಂಟೆ 46 ನಿಮಿಷದಲ್ಲಿ ಬಜೆಟ್ ಭಾಷಣ ಮುಗಿಸಿದ ಸಿಎಂ ಬಿಎಸ್’ವೈ

Next Post

ಕರೋನಾ ವೈರಸ್ ಕುರಿತಾಗಿ ವದಂತಿ ಹರಡಿಸಿದರೆ ಕ್ರಿಮಿನಲ್ ಮೊಕದ್ದಮೆ: ಶಿವಮೊಗ್ಗ ಡಿಸಿ ಎಚ್ಚರಿಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕರೋನಾ ವೈರಸ್ ಕುರಿತಾಗಿ ವದಂತಿ ಹರಡಿಸಿದರೆ ಕ್ರಿಮಿನಲ್ ಮೊಕದ್ದಮೆ: ಶಿವಮೊಗ್ಗ ಡಿಸಿ ಎಚ್ಚರಿಕೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಸಾಗರ ಮಾರಿಕಾಂಬಾ ಜಾತ್ರೆಗೆ ಯಶವಂತಪುರ-ತಾಳಗುಪ್ಪ 2 ಸ್ಪೆಷಲ್ ರೈಲುಗಳು | ಹೀಗಿದೆ ಡೀಟೇಲ್ಸ್

January 31, 2026
ಆತ ಶೇ.90ರಷ್ಟು ಅಂಗವಿಕಲ, ಆದರೆ ಎಸಗಿದ್ದು ಅತ್ಯಾಚಾರ | ಈಗ 20 ವರ್ಷ ಕಂಬಿ ಹಿಂದೆ ಫಿಕ್ಸ್

ಆತ ಶೇ.90ರಷ್ಟು ಅಂಗವಿಕಲ, ಆದರೆ ಎಸಗಿದ್ದು ಅತ್ಯಾಚಾರ | ಈಗ 20 ವರ್ಷ ಕಂಬಿ ಹಿಂದೆ ಫಿಕ್ಸ್

February 6, 2026
ಶಿಕಾರಿಪುರ | ಮನೆಯಲ್ಲೇ ಅಕ್ರಮ ಬಂದೂಕು ತಯಾರಿ | ಆರೋಪಿ ಬಂಧನ | ಏಳು ಬಂದೂಕು ವಶ

ಶಿಕಾರಿಪುರ | ಮನೆಯಲ್ಲೇ ಅಕ್ರಮ ಬಂದೂಕು ತಯಾರಿ | ಆರೋಪಿ ಬಂಧನ | ಏಳು ಬಂದೂಕು ವಶ

February 6, 2026
ಕರೂರು ಕಾಲ್ತುಳಿತ ಪ್ರಕರಣ | ಟಿವಿಕೆ ಮುಖ್ಯಸ್ಥ, ನಟ ವಿಜಯ್’ಗೆ ಸಿಬಿಐ 2ನೇ ಸುತ್ತಿನ ವಿಚಾರಣೆ

ಟಿವಿಕೆ ಮುಖ್ಯಸ್ಥ, ನಟ ವಿಜಯ್’ಗೆ 1.5 ಕೋಟಿ ಐಟಿ ದಂಡ | ನ್ಯಾಯಾಲಯದಲ್ಲೂ ಹಿನ್ನಡೆ

February 6, 2026
5 ವರ್ಷ ಸಿದ್ದರಾಮಯ್ಯ ಸಿಎಂ | ಯತೀಂದ್ರ ಮಾತಿಗೆ ಟಕ್ಕರ್ ಕೊಟ್ಟ ಡಿಸಿಎಂ ಹೇಳಿದ್ದೇನು?

5 ವರ್ಷ ಸಿದ್ದರಾಮಯ್ಯ ಸಿಎಂ | ಯತೀಂದ್ರ ಮಾತಿಗೆ ಟಕ್ಕರ್ ಕೊಟ್ಟ ಡಿಸಿಎಂ ಹೇಳಿದ್ದೇನು?

February 6, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಈ ದಿನಗಳಂದು ಬೆಂಗಳೂರು-ಹೊಸಪೇಟೆ, ಧಾರವಾಡ ಸೇರಿ ಹಲವು ರೈಲು ಸಂಚಾರದಲ್ಲಿ ಬದಲಾವಣೆ

February 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL