ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್19 ತಡೆಗೆ ತಜ್ಞರ ಸಲಹೆಯಂತೆ ರಾಜ್ಯ ಸರ್ಕಾರ 5 ಟಿ ಸೂತ್ರವನ್ನು ಪಾಲಿಸುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯವನ್ನುದ್ದೇಶಿಸಿ ಮಾತನಾಡಿದ ಅವರು, ತಜ್ಞರು ನಮಗೆ 5 ಟಿ ಸೂತ್ರವನ್ನು ಸಲಹೆ ಮಾಡಿದ್ದಾರೆ. 5 ಟಿ ಎಂದರೆ ಟ್ರೇಸ್, ಟ್ರಾಕ್, ಟೆಸ್ಟ್, ಟ್ರೀಟ್ಮೆಂಟ್ ಹಾಗೂ ಟೆಕ್ನಾಲಜಿ ಮೂಲಕ ಕೋವಿಡ್19 ತಡೆಗೆ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಕೊರೋನಾ ಪರೀಕ್ಷಾ ವರದಿಯ ವರದಿ ನೀಡುವ ಸಮಯದಲ್ಲಿ ಇದ್ದ ಗೊಂದಲವನ್ನು ಈಗ ಸರಿಪಡಿಸಲಾಗಿದ್ದು, ಇನ್ನು ಮುಂದೆ ಕೋವಿಡ್19 ಪರೀಕ್ಷಾ ವರದಿ ಕೇವಲ 24 ಗಂಟೆಗಳಲ್ಲಿ ದೊರೆಯಲಿದೆ ಎಂದರು.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ತಡೆಗೆ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಇದರ ತಡೆಗೆ ಕೇವಲ ಲಾಕ್ ಡೌನ್ ಒಂದೇ ಪರಿಹಾರವಾಗುವುದಿಲ್ಲ. ಬದಲಾಗಿ, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ತೀರಾ ಅಗತ್ಯವಾಗಿದ್ದು, ಇದರ ಕಟ್ಟುನಿಟ್ಟಿನ ಜಾರಿಗೆ ಆದೇಶಿಸಿದ್ದೇನೆ ಎಂದರು.
Get In Touch With Us info@kalpa.news Whatsapp: 9481252093
Discussion about this post