ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ತಡೆಗಟ್ಟಲು ಎಪ್ರಿಲ್ 21ರವೆರಗೂ ದೇಶದಾದ್ಯಂತ ಲಾಕ್’ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾರಾದರೂ ಅನಾವಶ್ಯಕವಾಗಿ ರಸ್ತೆಗಳಲ್ಲಿ ತಿರುಗಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ.
9 ದಿನ ರಾಜ್ಯ ಶಟ್’ಡೌನ್: ಆದೇಶ ಉಲ್ಲಂಘಿಸಿ ಓಡಾಡಿದರೆ ಐಪಿಸಿ ಅಡಿಯಲ್ಲಿ ಕ್ರಿಮಿನಲ್ ಕೇಸ್ ಎದುರಿಸುತ್ತೀರಿ ಎಚ್ಚರ
ಈ ಕುರಿತಂತೆ ಮಾತನಾಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾರ್ಚ್ 22ರಂದು ಜನತಾ ಕರ್ಫ್ಯೂ ಘೋಷಣೆಯಾಗಿದ್ದ ದಿನ ಹೇಗೆ ಕಟ್ಟುನಿಟ್ಟಾಗಿತ್ತೋ ಅದೇ ರೀತಿಯಲ್ಲಿ ಮುಂದಿನ 21 ದಿನ ಇರುತ್ತದೆ. ಕೇಂದ್ರದ ಆದೇಶ ಮೀರಿ ಯಾರಾದರೂ ಅನಾವಶ್ಯಕವಾಗಿ ರಸ್ತೆಯಲ್ಲಿ ಅಡ್ಡಾಡುವುದು, ಶೋಕಿಗಾಗಿ ಬೈಕ್, ಕಾರುಗಳಲ್ಲಿ ಓಡಾಡುವುದು ಮಾಡಿದರೆ ಕಾನೂನಿನ ಅಡಿಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
Get in Touch With Us info@kalpa.news Whatsapp: 9481252093
















