ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಕುಸಿತ ಕಂಡಿರುವ ಹಿನ್ನೆಲೆಯ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗುವುದೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ವಿಶ್ವದ ಅತಿ ದೊಡ್ಡ ತೈಲ ಉತ್ಪಾದಕ ರಾಷ್ಟ್ರ ಸೌದಿಯು ತನ್ನ ಕಚ್ಛಾ ತೈಲ ಮಾರಾಟ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದ್ದು ಮಾತ್ರವಲ್ಲದೇ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಕಚ್ಛಾ ತೈಲವನ್ನು ಪೂರೈಸುತ್ತಿದೆ. ಆದರೆ ವಿಶ್ವವೆಲ್ಲಾ ಕರೋನಾ ಭೀತಿಗೆ ತತ್ತರಿಸಿರುವಾಗ ತೈಲ ಬೇಡಿಕೆಯಲ್ಲೂ ಕುಸಿತ ಉಂಟಾಗಿದ್ದು ಇವೆಲ್ಲದರ ಒಟ್ಟು ಪರಿಣಾಮ ಒಪೆಕ್ ನಲ್ಲಿ ಕಚ್ಛಾ ತೈಲದ ಬೆಲೆ ಶೇ.30ರಷ್ಟು ಕುಸಿತಕ್ಕೆ ಕಾರಣವಾಗಿದೆ.

ಬ್ರೆಂಟ್ ಕಚ್ಛಾ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆ 14.25 ಡಾಲರ್ ಗೆ ಕುಸಿತ ಕಂಡಿದೆ ಇದು ಒಟ್ಟಾರೆಯಾಗಿ 31.5% ಕುಸಿತ ಕಂಡಂತಾಗಿದೆ, ಇದೀಗ ಒಂದು ಬ್ಯಾರೆಲ್ ಕಚ್ಛಾ ತೈಲಕ್ಕೆ 31.02 ಡಾಲರ್ ದರ ನಿಗದಿಯಾಗಿದೆ.
Get in Touch With Us info@kalpa.news Whatsapp: 9481252093















