ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಗರದ ಅಗ್ರಹಾರದ ಶೃಂಗೇರಿ ಶ್ರೀ ಶಂಕರಮಠದ #ShankarMutt ‘ಅಭಿನವ ಶಂಕರಾಲಯ’ದ ಶತಮಾನೋತ್ಸವ ಸಂಭ್ರಮಾಚರಣೆ ಮಾ. 30ರಿಂದ ಏಪ್ರಿಲ್ 6ರ ವರೆಗೆ ನೆರವೇರಲಿದ್ದು, ಈ ಸಂದರ್ಭ ದಿನವೂ ಸಂಜೆ 7ರಿಂದ 8ರವರೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಖ್ಯಾತರಾದ ವಿದ್ವಾಂಸರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಮಾ. 30ರಂದು ವಿದ್ವಾನ್ ಆರ್.ಕೆ. ಪದ್ಮನಾಭ (ವೀಣೆ) ಕಛೇರಿ ಆಯೋಜನೆಗೊಂಡಿದೆ. ವಿದ್ವಾನ್ ಶ್ರೀಧರ ಮೃದಂಗ ಮತ್ತು ವಿದ್ವಾನ್ ರಮೇಶ್ (ಘಟ) ಪಕ್ಕವಾದ್ಯ ಸಹಕಾರ ನೀಡಲಿದ್ದಾರೆ.

ಪಿಟೀಲು ವಾದನ
ಏ. 1ರಂದು ಯುವ ಕಲಾವಿದರಾದ ಸುಮುಖ ಮತ್ತು ರೂಪನಗುಡಿ ರತ್ನತೇಜ (ದ್ವಂದ್ವ ಪಿಟೀಲು) ಕಛೇರಿಗೆ ವಿಕ್ರಂ ಭಾರದ್ವಾಜ (ಮೃ) ಮತ್ತು ಟಿ.ಎನ್. ಅಜಯ್ (ಘಟ) ಸಹಕಾರವಿದೆ. ನಂತರ ಮೈಸೂರು ಮಂಜುನಾಥ್- ನಾಗರಾಜ್ (ದ್ವಂದ್ವ ಪಿಟೀಲು) ಕಛೇರಿ ಸಂಪನ್ನಗೊಳ್ಳಲಿದೆ. ಏ. 2ರಂದು ವಿದ್ವಾನ್ ಕೃಷ್ಣಮೂರ್ತಿ ತಂಡದವರು (ನಾಗಸ್ವರ)ದಲ್ಲಿ ರಂಜಿಸಲಿದ್ದಾರೆ.
ದ್ವಂದ್ವ ಗಾಯನ
ಏ. 3 ರಂದು ಶ್ರೀನಾಥ- ಅಮೋಘ ಅವರ ದ್ವಂದ್ವ ಗಾಯನಕ್ಕೆ ಶ್ರೀಧರ (ಮೃ) ಮತ್ತು ರಮೇಶ್ ಘಟ ಸಹಕಾರ ವಿಜೃಂಭಿಸಲಿದೆ.

5ರಂದು ಅದಿತಿ- ಕೀರ್ತನಾ (ಗಾಯನ) ಗಾನ ಸುಧೆಗೆ ರೂಪನಗುಡಿ ರತ್ನತೇಜ (ಪಿಟೀಲು) ಮತ್ತು ಪ್ರಣವ ಸುಬ್ರಹ್ಮಣ್ಯ (ಮೃದಂಗ) ಸಹಕಾರ ಮೆರುಗು ನೀಡಲಿದೆ.
6ರಂದು ಖ್ಯಾತ ಕಲಾವಿದೆ ಅಪರ್ಣಾ ಪಂಡಿತ್ ಶಾಸ್ತ್ರೀಯ ಗಾಯನಕ್ಕೆ ರೂಪನಗುಡಿ ರತ್ನತೇಜ (ಪಿಟೀಲು) ಮತ್ತು ಪ್ರಣವ ಸುಬ್ರಹ್ಮಣ್ಯ (ಮೃದಂಗ) ಅವರ ಪಕ್ಕವಾದ್ಯವಿದೆ.
ಒಟ್ಟಾರೆ ಶಾರದೆಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ, ಸಭಾ ಕಾರ್ಯಕ್ರಮ, ಹೋಮ, ಹವನ ಮತ್ತು ಪಂಡಿತ, ವಿದ್ವಜ್ಜನರ ಸಂಗಮದ ಸಂಭ್ರಮದಲ್ಲಿ ಸಂಗೀತಾರಾಧನೆಯೂ ಸಾವಿರಾರು ಶ್ರೋತೃಗಳ ಹೃನ್ಮನಗಳನ್ನು ತಣಿಸಲಿರುವುದು ಬಹು ವಿಶೇಷ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post