ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮೋಂಥಾ ಚಂಡಮಾರುತದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಪರಿಗಣಿಸಿ, ಬೆಂಗಳೂರಿನಿಂದ ಹೊರಡುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ದಕ್ಷಿಣ ಮಧ್ಯ ರೈಲ್ವೆ ತುರ್ತು ಮಾಹಿತಿ ಪ್ರಕಟಿಸಿದ್ದು, ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದ ಹಲವು ರೈಲುಗಳ ಸಂಚಾರ ವೇಳಾಪಟ್ಟಿಯನ್ನು ಸುಮಾರು 12 ಗಂಟೆಗಳ ಕಾಲದಷ್ಟು ಮರು ಹೊಂದಿಸಲಾಗಿದೆ ಎಂದು ತಿಳಿಸಿದೆ. ವಿವರಗಳು ಇಂತಿವೆ.
1. ಅಕ್ಟೋಬರ್ 28ರಂದು ಹೊರಡುವ 22501 ಸಂಖ್ಯೆಯ ಎಸ್’ಎಂವಿಟಿ ಬೆಂಗಳೂರು – ಹೊಸ ಟಿನ್ಸುಕಿಯಾ ಜಂಕ್ಷನ್ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್, ನಿಗದಿತ ನಿರ್ಗಮನದಿಂದ 12 ಗಂಟೆಗಳ ನಂತರ, ಅಂದರೆ ಬೆಳಿಗ್ಗೆ 03:10 ಗಂಟೆಗೆ ಬೆಂಗಳೂರಿನಿಂದ ಹೊರಡುವಂತೆ ಮರುಹೊಂದಿಸಲಾಗಿದೆ.
2. ಅಕ್ಟೋಬರ್ 28ರಂದು ಹೊರಡುವ 12836 ಸಂಖ್ಯೆಯ ಬೆಂಗಳೂರು – ಹಟಿಯಾ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್, ನಿಗದಿತ ನಿರ್ಗಮನದಿಂದ 12 ಗಂಟೆಗಳ ನಂತರ, ಅಂದರೆ ಬೆಳಿಗ್ಗೆ 08:50 ಗಂಟೆಗೆ ಬೆಂಗಳೂರಿನಿಂದ ಹೊರಡುವಂತೆ ಮರುಹೊಂದಿಸಲಾಗಿದೆ.
4. 12246 ಸಂಖ್ಯೆಯ ಬೆಂಗಳೂರು – ಹೌರಾ ಜಂಕ್ಷನ್ ಡುರೊಂಟೊ ಎಕ್ಸ್’ಪ್ರೆಸ್, 28.10.2025 ರಂದು ಪ್ರಾರಂಭವಾಗುವ ಪ್ರಯಾಣವನ್ನು, ನಿಗದಿತ ನಿರ್ಗಮನದಿಂದ 12 ಗಂಟೆಗಳ ನಂತರ, ಅಂದರೆ ಬೆಳಿಗ್ಗೆ 11:15 ಕ್ಕೆ ಬೆಂಗಳೂರಿನಿಂದ ಹೊರಡುವಂತೆ ಮರು ನಿಗದಿಪಡಿಸಲಾಗಿದೆ.
5. 12864 ಸಂಖ್ಯೆಯ ಬೆಂಗಳೂರು – ಹೌರಾ ಜಂಕ್ಷನ್ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್, ಅಕ್ಟೋಬರ್ 28ರಂದು ಪ್ರಾರಂಭವಾಗುವ ಪ್ರಯಾಣವನ್ನು, ನಿಗದಿತ ನಿರ್ಗಮನದಿಂದ 12 ಗಂಟೆಗಳ ನಂತರ, ಅಂದರೆ ಬೆಳಿಗ್ಗೆ 10:35 ಕ್ಕೆ ಬೆಂಗಳೂರಿನಿಂದ ಹೊರಡುವಂತೆ ಮರು ನಿಗದಿಪಡಿಸಲಾಗಿದೆ.

7. 18048 ಸಂಖ್ಯೆಯ ವಾಸ್ಕೋ ಡ ಗಾಮಾ – ಶಾಲಿಮಾರ್ ಅಮರಾವತಿ ಎಕ್ಸ್’ಪ್ರೆಸ್, ಅಕ್ಟೋಬರ್ 28ರಂದು ಪ್ರಾರಂಭವಾಗುವ ಪ್ರಯಾಣ, ನಿಗದಿತ ನಿರ್ಗಮನದಿಂದ 12 ಗಂಟೆಗಳ ಕಾಲ ವಾಸ್ಕೋಡಗಾಮಾದಿಂದ ನಿರ್ಗಮಿಸಲು ಮರು ಹೊಂದಿಸಲಾಗಿದೆ, ಅಂದರೆ, 06:30 ಕ್ಕೆ ಹೊಂದಿಸಲಾಗಿದೆ.
ರೈಲಿನ ಮಾರ್ಗ ಬದಲು
ಇನ್ನು, 18638 ಸಂಖ್ಯೆಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು – ಹಟಿಯಾ ಎಕ್ಸ್’ಪ್ರೆಸ್, ಅಕ್ಟೋಬರ್ 28ರಂದು ಹೊರಡಲಿದ್ದು, ವಿಜಯವಾಡ, ವಾರಂಗಲ್, ಬಲ್ಹಷಾರ್, ಚಾಮ್ಡಾ ಕೋಟೆ, ಬಿಲಾಸ್ಪುರ್ ಜಂ, ಮತ್ತು ಝಾರ್ಸುಗುಡ ಜಂ. ಮೂಲಕ ಸಂಚರಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post