ಶಿವಮೊಗ್ಗ: ಚಲಿಸುತ್ತಿದ್ದ ಸಿಲಿಂಡರ್ ತುಂಬಿದ ಲಾರಿ ಸ್ಫೋಟಗೊಂಡ ಪರಿಣಾಮ ಚಾಲಕ ಸಜೀವ ದಹನವಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪ ಮಧ್ಯೆ ಇರುವ ಮುಂಡಿಗೆಹಳ್ಳ ಬಳಿ ಲಾರಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಲಾರಿ ಸ್ಪೋಟಗೊಂಡ ಕಾರಣ ಚಾಲಕ ಕೃಷ್ಣಮೂರ್ತಿ ಸಜೀವ ದಹನವಾಗಿದ್ದಾರೆ.
ಮೃತ ಕೃಷ್ಣಮೂರ್ತಿ ಭದ್ರಾವತಿಯ ಮಾವಿನಕಟ್ಟೆ ಗ್ರಾಮದವರು ಎನ್ನಲಾಗಿದೆ. ಈ ಘಟನೆ ಬೆಳ್ಳಗೆ ನಾಲ್ಕುವರೆ ಗಂಟೆಗೆ ನಡೆದಿದೆ. ಲಾರಿಯು ಇಂಡಿಯನ್ ಗ್ಯಾಸ್ ಕಂಪನಿಗೆ ಸೇರಿದ್ದು. ಸ್ಫೋಟ ದಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಅಗ್ನಿ ಶಾಮಕದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Stiff fingers every morning? Your joints may be sending an early warning
Kalpa Media House | Special Article | The alarm rings, and you reach out to switch it off. But your...
Read moreDetails





