ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಮೂವರು ಗಾಯಗೊಂಡಿರುವ ಘಟನೆ ಇಲ್ಲಿನ ಶರಾವತಿ ನಗರದ 1ನೇ ಅಡ್ಡರಸ್ತೆಯ ಸುನ್ನಿ ಮಸ್ಜಿದ್ ಮಸೀದಿ ಪಕ್ಕದ ಓಣಿಯಲ್ಲಿ ನಡೆದಿದೆ.
ಇಂದು ಸಂಜೆ ಇಲ್ಲಿನ ಪೀರಾನ್ ಸಾಬ್ ಎಂಬುವವರ ಮನೆಯಲ್ಲಿ ಇಂದು ಸಂಜೆ ಸಿಲಿಂಡರ್ ಸ್ಪೋಟಗೊಂಡಿದೆ.
ಮನೆಯಲ್ಲಿದ್ದ ಎಂ.ಬಿ.ಪೀರಾನ್ ಸಾಬ್(48), ಅವರ ಪತ್ನಿ ಸಾಹೇರಾ(40), ಸೊಸೆ ಜಯೇಬಾ(22) ಗಾಯಗೊಂಡಿದ್ದಾರೆ.
ಕೂಡಲೆ ಮೂವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಫೋಟದ ರಭಸಕ್ಕೆ ಮನೆಯ ಛಾವಣಿ ಹಾರಿ ಹೋಗಿದೆ. ಒಳಗಿದ್ದ ವಸ್ತುಗಳಿಗೆ ಹಾನಿಯಾಗಿದೆ.
ಮನೆಯ ಮುಂದೆ ಕುಳಿತಿದ್ದಾಗ ಏಕಾಏಕಿ ಬೇಕು ಕಾಣಿಸಿಕೊಂಡಿದ್ದು, ಸ್ಫೋಟಗೊಂಡಿದೆ.
ಅಗ್ನಿ ಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post