ಕಲ್ಪ ಮೀಡಿಯಾ ಹೌಸ್ | ದಕ್ಷಿಣ ಕನ್ನಡ |
ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಇತಿಹಾಸದಲ್ಲೇ ಅತಿ ಹೆಚ್ಚು ಆದಾಯ ಗಳಿಸುವ ಸ್ಥಾನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಪ್ರಥಮ ಸ್ಥಾನದಲ್ಲಿದೆ.
ಹೌದು… ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವಾರ್ಷಿಕ ಆದಾಯ 123 ಕೋಟಿ ರೂ.ಗೆ ತಲುಪಿದ್ದು, 2022ರ ಎಪ್ರಿಲ್’ನಿಂದ 2023 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ 123,64,49,480.47 ರೂ. ಆದಾಯ ಗಳಿಸಿರುವ ಕ್ಷೇತ್ರವಾಗಿದೆ.
ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯ ಬರುತ್ತಿದೆ ಎಂದು ವರದಿಯಾಗಿದೆ.
Also read: ಬಿಜೆಪಿಯನ್ನು ನಾನು ಯಾಕೆ ತೊರೆದೆ?: ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಹೇಳಿದ್ದೇನು?
ಇನ್ನು, 2006-07ನೆಯ ಸಾಲಿನಲ್ಲಿ ಈ ದೇವಾಲಯ ಆದಾಯ 19,76 ಕೋಟಿ ರೂ. ಆಗಿದ್ದು, 2007- 08ರಲ್ಲಿ 24.44 ಕೋಟಿ ರೂ. ಗಳಿಗೆ ಏರಿತ್ತು. 2008-09ರಲ್ಲಿ 31 ಕೋಟಿ ರೂ., 2009-10ರಲ್ಲಿ 38.51 ಕೋಟಿ, 2011-12ರಲ್ಲಿ 56.24 ಕೋಟಿ, 2012-13ರಲ್ಲಿ 66.76 ಕೋಟಿ, 2013-14ರಲ್ಲಿ 68 ಕೋಟಿ, 2014-15ರಲ್ಲಿ 77 ಕೋಟಿ, 2015-16ರಲ್ಲಿ 88 ಕೋಟಿ, 2016-17ರಲ್ಲಿ 91.69 ಕೋಟಿ, 2017-18ರಲ್ಲಿ 95.92 ಕೋಟಿ, 2018-19ರಲ್ಲಿ 92,09 ಕೋಟಿ, 2019-20ರಲ್ಲಿ 98.92 ಕೋಟಿ, 2020-21ರಲ್ಲಿ 68.94 ಕೋಟಿ, 2021-22ರಲ್ಲಿ 12.73 ಕೋಟಿ ಆದಾಯ ಗಳಿಸಿತ್ತು ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post