ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ದಲಿತ ನಾಗರಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಡಿವೈಎಸ್’ಪಿ ಕೆ.ವಿ. ಶ್ರೀಧರ್ ಕರೆ ನೀಡಿದರು.
ತಾಲೂಕಿನ ರೆಡ್ಡಿಹಳ್ಳಿ ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ದಲಿತರ ಕುಂದುಕೊರತೆ ಸಭೆಯನ್ನುದ್ದೇಶಸಿ ಅವರು ಮಾತನಾಡಿದರು.
ದಲಿತ ನಾಗರೀಕರು ಮುಖ್ಯವಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ಬಾಲ್ಯವಿವಾಹ, ಮೌಢ್ಯತೆ, ಕಂದಚಾರಕ್ಕೆ ಬಲಿಯಾಗಬಾರದು. ದೌರ್ಜನ್ಯ ಅನ್ಯಾಯವಾದಗ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.
ತಾಲೂಕಿನಲ್ಲಿ ಪ್ರತಿ ತಿಂಗಳು ದಲಿತ ಸಭೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಯಾವುದೇ ರೀತಿಯಲ್ಲೂ ದಲಿತರಿಗೆ ಅನ್ಯಾಯವಾಗದ ರೀತಿಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.
ದಲಿತರು ತಮ್ಮ ನ್ಯಾಯಯುತ ಬೇಡಿಕೆ, ಸಮಸ್ಯೆಗಳ ಇತ್ಯರ್ಥಕ್ಕಾಗಿ ತಮ್ಮನ್ನು ಯಾವುದೇ ಸಂದರ್ಭದಲ್ಲಿ ಭೇಟಿಯಾಗಿ, ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಸಂವಿಧಾನ, ಕಾನೂನಿನ ಅರಿವು, ನೆರವು ಕುರಿತು ಇಂದಿನ ಯುವಕ, ಯುವತಿಯರಲ್ಲಿ ಅರಿವು ಮೂಡಬೇಕು. ದಲಿತರ ನಾಗರಿಕರು ಮುಖ್ಯವಾಗಿ ಶಿಕ್ಷಣಕ್ಕೆ ಹಚ್ಚು ಒತ್ತು ನೀಡಬೇಕು. ಅಂಬೇಡ್ಕರ್ ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕು, ಸಮಸ್ಯೆಗಳು ಬಂದಾಗ ತಕ್ಷಣವೇ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು, ಬಾಲ್ಯವಿವಾಹ ಮಾಡಕೂಡದು ಹಾಗೂ ಮೌಢ್ಯತೆ ಹೊಡೆದೊಡಿಸಬೇಕು ಎಂದು ಕರೆ ನೀಡಿದರು.
ಪೋಲೀಸ್ ಇನ್ಸ್’ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ ಮಾತನಾಡಿದರು. ರೆಡ್ಡಿಹಳ್ಳಿ ಗ್ರಾಮದ ಮುಖಂಡರು ನಾಗರೀಕರು ಪೋಲೀಸ್ ಸಿಬ್ಬಂದಿಗಳು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post