ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಉಡುಗೊರೆ ನೀಡಿರುವ ಸಮ್ಮಿಶ್ರ ಸರ್ಕಾರ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಈ ಕುರಿತಂತೆ ಇಂದು ಅಧಿಕೃತ ಆದೇಶ ಹೊರಡಿಸಲಾಗಿದ್ದು, 2018 ಪರಿಷ್ಕೃತ ವೇತನ ಶ್ರೇಣಿಯಲ್ಲಿ ಶೇ.2ರಷ್ಟು ಏರಿಕೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ. ಅಲ್ಲದೇ ಇದು 2018ರ ಜುಲೈ 1ರಿಂದಲೇ ಪೂರ್ವನ್ವಯವಾಗಲಿದೆ.
ತುಟ್ಟಿಭತ್ಯೆ ಶೇ. 1.75ರಿಂದ ಶೇ. 3.75ಕ್ಕೆ ಏರಿಕೆ ಮಾಡಲಾಗಿದ್ದು, ಇದರಿಂದಾಗಿ 8.5 ಲಕ್ಷ ನೌಕರರ ಮಾಸಿಕ ವೇತನ ಹೆಚ್ಚಳವಾಗಲಿದೆ.
ಇದು, 2016ರ ಜನವರಿ 1ರ ಪೂರ್ವದಲ್ಲಿ ನಿವೃತ್ತರಾದ ನೌಕರರಿಗೂ ಸಹ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರವೂ ನೌಕರರ ತುಟ್ಟಿಭತ್ಯೆ ಮಾಡುವ ನಿರೀಕ್ಷೆಯಿತ್ತು. ಆದರೆ, ಕುಮಾರಸ್ವಾಮಿ ಸರ್ಕಾರ ಸ್ವಲ್ಪ ತಡವಾಗಿ ಹೆಚ್ಚಳ ಮಾಡಿದೆ.
Discussion about this post