ಬೆಂಗಳೂರು: ಆಡಳಿತಕ್ಕೆ ಚುರುಕು ಮುಟ್ಟಿಸುವ ಹಿನ್ನೆಲೆಯಲ್ಲಿ ಆರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.
ಹುದ್ದೆ ನಿರೀಕ್ಷೆಯಲ್ಲಿದ್ದ ಎಸ್. ಝಿಯಾವುಲ್ಲಾ ಅವರನ್ನು ಬೆಳಗಾವಿ ಸ್ಮಾರ್ಟ್ ಸಿಟಿ ಕಾರ್ಪೊರೇಶನ್ ಲಿ.ನ ಎಂಡಿ ಆಗಿ ನೇಮಕ ಮಾಡಿರುವ ರಾಜ್ಯ ಸರ್ಕಾರ, ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದ ಆರ್. ವೆಂಕಟೇಶ್ ಅವರನ್ನು ಎನ್‌ಇಕೆಆರ್‌ಟಿಸಿ ಎಂಡಿ ಆಗಿ ವರ್ಗಾವಣೆ ಮಾಡಿದೆ.
ಇನ್ನು, ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಬೆಂಗಳೂರು ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿಯ ಕಮಿಷನರ್ ಆಗಿ, ಪಶುಸಂಗೋಪನೆ ಹಾಗೂ ಪಶುವೈದ್ಯಕೀಯ ಮಂಡಳಿಯ ಜಂಟಿ ನಿರ್ದೇಶಕಿಯಾಗಿದ್ದ ಕೆ. ಲೀಲಾವತಿ ಅವರನ್ನು ಚಾಮರಾಜನರ ಜಿಲ್ಲಾ ಪಂಚಾಯತ್ ಸಿಇಒ ಆಗಿ, ಸರ್ವಶಿಕ್ಷಾ ಅಭಿಯಾನದ ನಿರ್ದೇಶಕಿಯಾಗಿದ್ದ ಎಸ್. ಹೊನ್ನಾಂಬ ಅವರನ್ನು ರಾಜ್ಯ ಮಾಹಿತಿ ಆಯೋಗದ ಕಾರ್ಯದರ್ಶಿಯಾಗಿ, ಬಿಬಿಎಂಪಿ ಡೆಪ್ಯೂಟಿ ಕಮಿಷನರ್(ಆಡಳಿತ) ಆಗಿದ್ದ ಜಿ.ಸಿ. ವೃಷಭೇಂದ್ರ ಮೂರ್ತಿ ಅವರನ್ನು ಬೆಂಗಳೂರು ಸಿಎಡಿಎ ನಿರ್ದೇಕರನ್ನಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Discussion about this post