ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗುಜರಾತ್ Gujrath ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಆರ್‌ಸಿಬಿ RCB ಅಭಿಮಾನಿಗಳಿಂದ ಗೋಪಿವೃತ್ತದಲ್ಲಿ, ಎಎ ವೃತ್ತದಲ್ಲಿ ಗೆಲುವಿನ ನಡೆದ ಸಂಭ್ರಮಾಚರಣೆ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ Laati Charge ನಡೆಸಿದರು.
ಆರ್‌ಸಿಬಿ ಪಂದ್ಯ ಗೆಲ್ಲುತ್ತಿದ್ದಂತೆ ಗೋಪಿ ವೃತ್ತದಲ್ಲಿ ಹಾಗೂ ಎಎ ವೃತ್ತದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಬೈಕ್ ಜಾಥಾ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದರು.
Also read: ದಾಸ ಸಾಹಿತ್ಯದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಲಿ: ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ
ಐಪಿಎಲ್ ಫೈನಲ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಗೋಪಿವೃತ್ತದಲ್ಲಿ, ಎ.ಎ. ವೃತ್ತದಲ್ಲಿ ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕೆಲವರು ಪಟಾಕಿ ಸಿಡಿಸಿದರು. ಇದೇ ವೇಳೆ ಕೆಲವು ಯುವಕರು ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು, ಬಸ್‌ಗಳನ್ನು ತಡೆದು ಸಂಭ್ರಮಾಚರಣೆಗೆ ಮುಂದಾದರು. ಬಿ.ಹೆಚ್.ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಸುಗಳು, ವಾಹನಗಳನ್ನು ತಡೆಯದಂತೆ ಪೊಲೀಸರು ಎಚ್ಚರಿಸಿದರು. ಆದರೆ ಕೆಲವು ಯುವಕರು ಇದನ್ನು ಮೀರಿ ರಸ್ತೆ ತಡೆದು ಕುಣಿಯಲು ಆರಂಭಿಸಿದರು. ಈ ವೇಳೆ ಪೊಲೀಸರು ಯುವಕರನ್ನು ರಸ್ತೆಯಿಂದ ಸೈಡಿಗೆ ಸರಿಸಲು ಯತ್ನಿಸಿದರು. ಆಗ ನೂಕಟ ತಳ್ಳಾಟವಾಯಿತು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಗುಂಪು ಚದುರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















