ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಸರಿಸುಮಾರು 50 ವರ್ಷಗಳ ಕಾಲ ದಾಂಪತ್ಯ ಸಾಗಿಸಿದ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು, ಪತ್ನಿಯನ್ನು ವೃದ್ಧ ಪತಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಆಜಾದ್ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವೃದ್ಧ ಚಮನ್ ಸಾಬ್ (78) ಅನ್ಯೋನ್ಯತೆಯಿಂದ 50 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ.
ಪತಿ-ಪತ್ನಿ ಇಬ್ಬರು ಒಂದು ಚಿಕ್ಕ ಮನೆಯಲ್ಲಿ ಜೀವನ ಮಾಡುತ್ತಿದ್ದರು. ಗಾರೇ ಕೆಲಸ ಮಾಡುತ್ತಿದ್ದ ವೃದ್ಧ ಚಮನ್ ಸಾಬ್’ಗೆ ಮಾನಸಿಕ ಕಾಯಿಲೆ ಇತ್ತು. ಈ ಹಿನ್ನೆಲೆಯಲ್ಲಿ ಮಕ್ಕಳು ಕೆಲಸ ಬಿಡಿಸಿ ಮನೆಯಲ್ಲಿಯೇ ಇರಿಸಿದ್ದರು. ಆದರೆ ನಿನ್ನೆ ಈದ್ ಮಿಲಾದ್ ಹಬ್ಬ ಇದ್ದರೂ ಕೂಡ ಯಾವುದೇ ಹಬ್ಬವನ್ನು ಆಚರಣೆ ಮಾಡದೆ ಜಗಳವಾಡಿದ್ದಾರೆ. ಈ ಜಗಳವೇ ಮಿತಿ ಮೀರಿ ಷಾಕೀರಾಬಾನುವನ್ನು ಆಕೆಯ ಪತಿ ಚಮನ್ ಸಾಬ್ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















