ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಆರ್ ಅಂಜನಪ್ಪ ರವರನ್ನು ಬೆಂಗಳೂರಿನ ಡಾ.ಜಿ.ಎಸ್ ಶಿವರುದ್ರಪ್ಪ ಪ್ರತಿಷ್ಟಾನಕ್ಕೆ ದಾವಣಗೆರೆ ಜಿಲ್ಲೆಯಿಂದ ಸದಸ್ಯರನ್ನಾಗಿ ಆಯ್ಕೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಇವರಿಗೆ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಾಮದೇವಪ್ಪ, ಕಾರ್ಯದರ್ಶಿಗಳಾದ ದಿಳ್ಳೆಪ್ಪ, ಕಾಲೇಜಿಗೆ ಭೇಟಿ ನೀಡಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಗಿರಿಸ್ವಾಮಿ, ಷಣ್ಮುಖ, ಅರ್ಥಶಾಸ್ತ್ರ ವಿಭಾಗದ ಪೆÇ್ರ. ಭೀಮಣ್ಣ ಸುಣಗಾರ, ಗಣಿತಶಾಸ್ತ್ರ ವಿಭಾಗದ ಯೋಗೇಶ, ಭೌತಶಾಸ್ತ್ರ ವಿಭಾಗದ ಮನೋಹರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post