ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ Gayathri Siddeshwar ಕೇವಲ ಅಡುಗೆ ಮಾಡಲಕ್ಕಷ್ಟೇ ಲಾಯಕ್ಕು ಎಂದು ವಿವಾದಾತ್ಮಕ ಟೀಕೆ ಮಾಡಿರುವ ಶಾಸಕ ಶಾಮನೂರು ಶಿವಶಂಕರಪ್ಪ Shamnuru Shivashankarappa ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇತ್ತೀಚೆಗೆ ಮಾತನಾಡುವ ವೇಳೆ ಗಾಯತ್ರಿ ಸಿದ್ಧೇಶ್ವರ ವಿರುದ್ಧ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ, ಎದುರಾಳಿ ಅಭ್ಯರ್ಥಿಗೆ ಜನರ ಮಧ್ಯೆ ಮಾತನಾಡಲು ಸಹ ಬರುವುದಿಲ್ಲ. ಅವರು ಕೇವಲ ಅಡುಗೆ ಮಾಡಲು ಮಾತ್ರ ಲಾಯಕ್ಕು. ಲೋಕಸಭೆ ಚುನಾವಣೆಯಲ್ಲಿ ಜನಬೆಂಬಲ ಪಡೆಯುವ ಮುನ್ನ ಅವರು ದಾವಣಗೆರೆಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲಿ ಎಂದು ಟೀಕಿಸಿದ್ದರು.

Also read: ಮುಸ್ಲಿಂ ರಾಜ ಕೆಡವಿದ್ದ 8ನೇ ಶತಮಾನದ ಮಾರ್ತಾಂಡ ದೇವಾಲಯ ಅನಂತನಾಗ್’ನಲ್ಲಿ ಶೀಘ್ರ ಮರುಸ್ಥಾಪನೆ
ಗಾಯತ್ರಿ ಸಿದ್ದೇಶ್ವರ ಕೌಂಟರ್
ಇನ್ನು, ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ತಿರುಗೇಟು ನೀಡಿರುವ ಗಾಯತ್ರಿ, ಅಡುಗೆ ಮಾಡಿ ಕೈತುತ್ತು ಕೊಡುವ ಪ್ರೀತಿ ಅವರಿಗೆ ಗೊತ್ತಿಲ್ಲ. ಮಹಿಳೆ ಇಂದು ಅಡುಗೆಯನ್ನೂ ಮಾಡುತ್ತಾಳೆ, ಆಕಾಶದಲ್ಲೂ ಹಾರಾಡುತ್ತಾಳೆ ಎಂದಿದ್ದಾರೆ.

ಇನ್ನು, ಶಾಮನೂರು ಅವರ ಹೇಳಿಕೆಗೆ ರಾಜಕೀಯ ಮಾತ್ರವಲ್ಲ ಎಲ್ಲ ವಲಯಗಳಿಂದಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post