ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಸಮ್ಮೇಳನದಲ್ಲಿ ನಿವೃತ್ತ ಹಿರಿಯ ಶಿಕ್ಷಕಿ ಮೀರಾ ಗೋಪಿನಾಥ್ ಸೇರಿದಂತೆ ವಿವಿಧ ರಂಗದ ಸಾಧಕರನ್ನು ಸನ್ಮಾನಿಸಲಾಯಿತು.
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಹಲವು ಸಾಧಕರನ್ನು ಗೌರವಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದವರನ್ನು ಅಭಿನಂದಿಸಿ, ಯುವಕರಿಗೆ ಪ್ರೇರಣೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ರೇಣುಕಾಚಾರ್ಯ ಸೇರಿದಂತೆ ಹಲವರು ಇದ್ದರು.
ನಿವೃತ್ತ ಹಿರಿಯ ಶಿಕ್ಷಕಿ ಮೀರಾ ಅವರ ಕುರಿತು…
ಶಿಕ್ಷಕಿಯಾಗಿ 35 ವರುಷ ಸೇವೆ ಸಲ್ಲಿಸಿದ ಮೀರಾ ಅವರು ನೂರಾರು ವಿದ್ಯಾರ್ಥಿಗಳ ಸಮಗ್ರ ಬದುಕಿಗೆ ಭದ್ರ ನೆಲೆಗಟ್ಟನ್ನು ರೂಪಿಸಿದ ಶಿಲ್ಪಿ.
Also Read: ವಿಐಎಸ್’ಎಲ್’ಗೆ ಹೆಚ್ಚಿನ ಬಂಡವಾಳ ಹೂಡಿ, ನಿವೃತ್ತ ನೌಕರರ ಸಮಸ್ಯೆ ಪರಿಹರಿಸಲು ಮನವಿ
ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಪಠ್ಯಕ್ರಮ ಬೋಧನೆಯಲ್ಲಿ ವಿಶೇಷ ಕಾಳಜಿ ಮತ್ತು ಮಕ್ಕಳ ಬಗ್ಗೆ ಅಪಾರ ಕಳಕಳಿ ಹೊಂದಿರುವ ಇವರು ಸರ್ಕಾರಿ ಸೇವೆಯಿಂದ ನಿವೃತ್ತರಾದರೂ ಪಾಠ ಮಾಡುವ ಪ್ರವೃತ್ತಿಯನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಸೇವಾ ಅವಧಿಯಲಿ ನಲಿ ಕಲಿ ಮುಂತಾದ ಯೋಜನೆ ಬರುವ ಮುನ್ನವೇ ತಾವೇ ಸ್ವತಃ ಬೋಧನಾ ಸಾಮಗ್ರಿಗಳನ್ನು ಮನೆಯಲೇ ತಯಾರಿಸಿಕೊಂಡು ಹೋಗಿ ಮಕ್ಕಳ ಜ್ಞಾನಮಟ್ಟ ಹೆಚ್ಚಿಸಲು ಶ್ರಮಿಸಿದವರು.
ಇವರಿಂದ ಕಲಿತವರು ಇಂದು ಖ್ಯಾತ ವೈದ್ಯರು, ಇಂಜಿನಿಯರ್ ಸೇರಿದಂತೆ ಉನ್ನತ ಅಧಿಕಾರಿ ಆಗಿದ್ದಾರೆ ಎಂಬುದು ಹೆಗ್ಗಳಿಕೆ. ಹೊನ್ನಾಳಿಯಲಿ ಯಾವುದೇ ಖಾಸಗಿ ಶಾಲೆ ಆರಂಭವಾದರೂ ಮೀರಾ ಟೀಚರ್ ಇರುವ ಕಾರಣ ನಾವು ಸರ್ಕಾರಿ ಶಾಲೆಗೇ ಹೋಗುತ್ತೇವೆ ಎಂದು ಮಕ್ಕಳು ಹಟ ಹಿಡಿದ ಅನೇಕ ಪ್ರಕರಣ ಇದ್ದವು.
ಇವರು ನಿವೇತ್ತರಾಗುವ ವೇಳೆಗೆ ಇವರ ವಿದ್ಯಾರ್ಥಿಯೊಬ್ಬ ಶಿಕ್ಷಣ ಇಲಾಖೆ ಸಬ್ಜೆಕ್ಟ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡರು ಎಂಬುದು ಹೆಗ್ಗಳಿಕೆ. ನನಗೆ ಮೊದಲು ಅಕ್ಷರ ಕಲಿಸಿದವರ ಪಾಠಗಳನ್ನು ನಾನೇನು ಪರಿಶೀಲಿಸಲಿ ಎಂದು ಅವರು ಕ್ಲಾಸ್ ರೂಮಿನಲೇ ಮೀರಾ ಟೀಚರ್ ಕಾಲಿಗೆ ಎರಗಿ ಆಶೀರ್ವಾದ ಪಡೆದದ್ದು ಹೊನ್ನಾಳಿ ಶಿಕ್ಷಣ ಇಲಾಖೆಯ ಇತಿಹಾಸದಲಿ ಅತಿ ವಿಶೇಷ ಎಂದು ಪರಿಗಣಿತವಾಗಿದೆ.
ನಿವೃತ್ತಿಯಾದರೂ ಮೀರಾ ಟೀಚರ್ ಮನೆಯಲ್ಲಿ ಅನೇಕ ಬಡ ಮಕ್ಕಳಿಗೆ ನಿತ್ಯ ಪಾಠ ಹೇಳುತ್ತಾರೆ. ಹತ್ತಿರದ ಸರ್ಕಾರಿ ಶಾಲೆಗೆ ಹೋಗಿ ಕೈಲಾದ ಸಹಾಯ ಮಾಡುತ್ತಾರೆ. ಹೊಸ ಪೀಳಿಗೆಯ ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತಾರೆ. ಡಿಡಿಪಿಐ ಗಳನ್ನು ಭೇಟಿ ಮಾಡಿ ನಮ್ಮೂರ ಶಾಲೆಗೆ ಇಂತಿಂಥ ಸೌಲಭ್ಯ ಬೇಕು ಎಂದು ಧೈರ್ಯವಾಗಿ ಕೇಳುತ್ತಾರೆ. ಇಷ್ಟು ಇದ್ದರೂ ಎಂದು ಪ್ರಶಸ್ತಿ, ಪುರಸ್ಕಾರಗಳಿಗೆ ಅರ್ಜಿ ಹಾಕಿ ಕೇಳಿಲ್ಲ, ಅದಕಾಗಿ ಎಂದೂ ಹಂಬಲಿಸಿಲ್ಲ.
Also Read: ಬಲಿಪಶು ಆಗಬೇಡಿ-ಈಗೋ ಬಿಡಿ, ಪರೀಕ್ಷೆ ಬರೆಯಿರಿ: ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ನಾಗೇಶ್ ಕಿವಿಮಾತು
ನಿಸ್ವಾರ್ಥ ಸೇವೆ ಪರಿಗಣಿಸಿ ಜಿಲ್ಲಾ ಕಸಾಪ ಪದಾಧಿಕಾರಿಗಳೇ ಇವರ ಮನೆಗೆ ಬಂದು ಆಹ್ವಾನ ನೀಡಿ, ಅತಿ ಆತ್ಮೀಯತೆಯಲಿ ಒಪ್ಪಿಸಿದ ಕಾರಣ ಮೀರಾ ಅವರು ಸನ್ಮಾನ ಸ್ವೀಕಾರ ಮಾಡಿದ್ದಾರೆ. ಬೋಧನಾ ಸೇವೆಗೆ ಸಹಕಾರ ನೀಡಿದ ಕುಟುಂಬದವರು, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಪ್ರೀತಿಯ ವಿದ್ಯಾರ್ಥಿಗಳಿಗೆ ಈ ಸನ್ಮಾನ ಅರ್ಪಣೆ ಎಂದು ಸಮಾರಂಭದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಭವಿಷ್ಯದ ಪ್ರಜೆಗಳನ್ನು ರೂಪಿಸುವ ಮಹದಾಶಯವನ್ನು ನಿವೃತ್ತಿಯಾದರೂ ಇವರು ಬಿಟ್ಟಿಲ್ಲ. ಇಂಥ ಶಿಕ್ಷಕರ ಸಂಖ್ಯೆ ಸಾವಿರವಾಗಲಿ ಎಂದು ಕಲ್ಪ ಮೀಡಿಯಾ ಹೌಸ್ ಬಯಸುತ್ತದೆ.
ಗುರು ಸಾಕ್ಷಾತ್ ಪರಬ್ರಹ್ಮ…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post