ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ದಾವಣಗೆರೆ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ನವೀನ್ ಕುಮಾರ್ ಆರ್ ರವರು ಗಣಿತಶಾಸ್ತ್ರದ “ಶಾಖ ಮತ್ತು ಸಮೂಹ ವರ್ಗಾವಣೆ , ದ್ರವಚನ ಶಾಸ್ತ್ರ ” ವಿಷಯಗಳಲ್ಲಿ ಮಂಡಿಸಿದ ಪ್ರಬಂಧಕ್ಕೆ ಪಿಹೆಚ್ ಡಿ ಪದವಿ ಸಂದಿದೆ.
ಹಿರಿಯೂರು ತಾಲ್ಲೂಕಿನ ರಂಗಸ್ವಾಮಿ ಅವರ ಪುತ್ರರಾಗಿರುವ ನವೀನ್ ಕುಮಾರ್ ಆರ್ ರವರು ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯವು ತಯಾರಿಸಿದ 2021ರವರೆಗಿನ ಜಾಗತಿಕ ಮಟ್ಟದ ಅತ್ಯುನ್ನತ ಶೇ. 2ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಒಟ್ಟಾರೆ 87 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಪ್ರಕಟಣೆಗಳು ಉಲ್ಲೇಖಗಳು-3264, ಹೆಚ್-ಇಂಡೆಕ್ಸ್-37, ಐ-ಟೆನ್ ಇಂಡೆಕ್ಸ್-63 ಗಳನ್ನು ಒಳಗೊಂಡಿರುತ್ತದೆ.











Discussion about this post