ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಜೋಕಾಲಿ ಆಡುವ ವೇಳೆ ಅದರ ಹಗ್ಗವೇ ಉರುಳಾಗಿ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ನಡೆದಿದೆ.
ಮೃತ ಬಾಲಕನನ್ನು ತಾಲೂಕಿನ ಸವಳಂಗ ಗ್ರಾಮದ ಪಿ.ಜೆ. ಕೊಟ್ರೇಶಿ(13) ಎಂದು ಗುರುತಿಸಲಾಗಿದೆ.
ಮೃತ ಬಾಲಕ ಕೊಟ್ರೇಶಿ ಶಾಲೆಯಿಂದ ಮನೆಗೆ ಬಂದು, ತಮ್ಮ ಮನೆಯಲ್ಲಿ ಮಗು ಆಡಿಸಲು ಹಾಕಿದ್ದ ಜೋಕಾಲಿಯಲ್ಲಿ ಆಡಲು ಆರಂಭಿಸಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಕೊರಳಿಗೆ ಉರುಳು ಬಿದ್ದು ಉಸಿರುಗಟ್ಟಿ ಬಾಲಕ ಸಾವನಪ್ಪಿದ್ದಾನೆ ಎಂದು ವರದಿಯಾಗಿದೆ.
Also read: ಫೆ.26: ಸಂಸ್ಕೃತ ಬೋರ್ಡ್ ರಾರಾಜಿಸುವ 554 ಅಮೃತ್ ಭಾರತ್ ರೈಲು ನಿಲ್ದಾಣಕ್ಕೆ ಪ್ರಧಾನಿ ಶಂಕುಸ್ಥಾಪನೆ
ಮೃತ ಬಾಲಕ ಕೊಟ್ರೇಶಿ ಶಿವಮೊಗ್ಗ ಜಿಲ್ಲೆಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು ಎನ್ನಲಾಗಿದೆ.
ಬಾಲಕನ ತಂದೆ ಎನ್.ಜಿ. ಪ್ರವೀಣ್ ಅವರು ನೀಡಿದ ದೂರಿ ಬೆನ್ನಲ್ಲೆ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post