ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಟಿ ಆರ್ ಡಿ ಎಫ್ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಯೋಜನೆಯಾದ ಪಿಎಂಜೆ ವೈನ ಎನೇಬಲ್ ಹೆಲ್ತ್ ಆಂಡ್ ವೆಲ್ನೆಸ್ ಸೆಂಟರ್ ಅನ್ನು ಜಗಳೂರು ತಾಲೂಕಿನ ಪಲ್ಲಾಗಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ.
ಸಿರಿಗೆರೆಯ ತರಳಬಾಳು ಜಗದ್ಗುರು ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕೇಂದ್ರವನ್ನು ಸ್ಥಾಪಿಸಲು ಒಡಬಂಡಿಕೆ ಮಾಡಿಕೊಳ್ಳಲಾಗಿದೆ.

ಅಸ್ತಿತ್ವದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಹಾಗೂ ದಾನಿಗಳ ಸಹಾಯದಿಂದ ತಂತ್ರಜ್ಞಾನ ಸಕ್ರಿಯಗೊಳಿಸಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಸ್ಥಳೀಯ ಮತ್ತು ದೂರದ ವೈದ್ಯರ ಸೇವೆಯನ್ನು ಬಳಸಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಶಿವಮೊಗ್ಗ ಸರ್ಜಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಧನಂಜಯ ಸರ್ಜಿ ಅವರು ತಮ್ಮ ಆಸ್ಪತ್ರೆಗಳಿಂದ ಪರಿಣಿತ ವೈದ್ಯರ ಸೇವೆ ಒದಗಿಸಲಿದ್ದು, ಇದು ಯೋಜನೆಗೆ ಮತ್ತಷ್ಟು ಬಲ ತಂದಿದೆ. ಅಲ್ಲದೇ ಅವರ ಮಾನವೀಯ ಕಾಳಜಿಗೆ ಸಾಕ್ಷಿಯಾಗಿದೆ.
ಡಾ.ಕೆ.ಬಸವರಾಜ್, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ
Also read: ವಿಶ್ವಮಟ್ಟದಲ್ಲಿ ಕರ್ನಾಟಕ ಸಂಗೀತ ಪರಿಚಯಿಸುವ ಹೊಣೆ ನಮ್ಮ ಮೇಲಿದೆ: ವಯೋಲಿನ್ ವಿದ್ವಾಂಸ ಡಾ. ಮಂಜುನಾಥ್
ಈ ಮಹತ್ವದ ಯೋಜನೆಗೆ ಸರ್ಜಿ ಆಸ್ಪತ್ರೆಯು ಅಗತ್ಯ ತಜ್ಞ ವೈದ್ಯರ ಸೇವೆಯನ್ನು ಒದಗಿಸುವ ಮೂಲಕ ಪ್ರಧಾನ ಮಂತ್ರಿಗಳ ಕನಸಿನ ಕೂಸಾದ ಉನ್ನತ ಮಟ್ಟದ ವೈದ್ಯಕೀಯ ಸೇವೆಯನ್ನು ಪ್ರತಿ ಹಳ್ಳಿಗಳಿಗೆ ತಲುಪಿಸಲು ಡಾ. ಧನಂಜಯ ಸರ್ಜಿಯವರು ಪ್ರಥಮ ಹೆಜ್ಜೆ ಇಟ್ಟಂತಾಗಿದೆ. ಟೆಸ್ಲಾನ್ ಟೆಕ್ನಾಲಜೀಸ್ ಸಂಸ್ಥೆಯು ತಾಂತ್ರಿಕತೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಯೋಜನೆ ಅನುಷ್ಠಾನಕ್ಕೆ ಮುಂದಾಗಲಿದೆ. ಈ ಒಂದು ಒಡಂಬಡಿಕೆಗೆ ಸಹಿ ಮಾಡುವ ಮೂಲಕ ಅತ್ಯಾಧುನಿಕ ವೈದ್ಯಕೀಯ ಸೇವೆಯನ್ನು ದೇಶಕ್ಕೆ ಮಾದರಿಯಾಗಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಿದಂತಾಗಿದೆ. ಎಲ್ಲೆಡೆ ಆರೋಗ್ಯ ಮತ್ತು ಎಲ್ಲರಿಗೂ ಆರೋಗ್ಯ ಘೋಷ ವಾಕ್ಯದಡಿ ಸೇವೆ ದೊರೆಯಲಿದೆ.












Discussion about this post