ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ವೀರಶೈವ-ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳು ಒಂದಾಗುವ ಸಮಯ ಬಂದಿದೆ. ಸಮಾಜದ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಒಂದಾಗಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ Minister Lakshmi Hebbalkar ಹೇಳಿದ್ದಾರೆ.
ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ವೀರಶೈವ-ಲಿಂಗಾಯತ 24ನೇ ಮಹಾ ಅಧಿವೇಶನದಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ನಮ್ಮ ಸಮಾಜ ಮತ್ತಷ್ಟು ಸದೃಢವಾಗಬೇಕಾದರೆ, ನಾವು ಇಂದು ಒಂದಾಗಬೇಕು. ಸಮಾಜದ ಮಗಳಾಗಿ, ಸರ್ಕಾರದ ಮಂತ್ರಿಯಾಗಿ, ವೀರಶೈವ ಸಮಾಜ ಕೈಗೊಂಡ ಎಲ್ಲ ನಿರ್ಣಯಗಳಿಗೆ ನನ್ನ ಬೆಂಬಲವಿದೆ ಎಂದು ಸಚಿವರು ಹೇಳಿದರು.

Also read: ಉಡುಪಿ | ಶ್ರೀಕೃಷ್ಣನ ದರ್ಶನ ಪಡೆದ ಖ್ಯಾತ ನಟಿ ಪೂಜಾ ಗಾಂಧಿ ದಂಪತಿ
ಮಹಾ ಅಧಿವೇಶನದಲ್ಲಿ ಸಚಿವೆಯಾಗಿ ಪಾಲ್ಗೊಳ್ಳುತ್ತಿರುವುದು ವೈಯಕ್ತಿಕವಾಗಿ ಖುಷಿ ನೀಡಿದೆ. ಅಧಿವೇಶನದಲ್ಲಿ ಹಿರಿಯರು ಕೈಗೊಳ್ಳುವ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಲಿಂಗಾಯತರು ಸುಧಾರಿಸಿದರೆ ಇಡೀ ರಾಜ್ಯ ಸುಧಾರಿಸುತ್ತದೆ. ಆರ್ಥಿಕವಾಗಿ ನಮ್ಮ ಸಮುದಾಯ ಸದೃಢವಾಗಬೇಕು. ನಾವು ಸದೃಢರಾಗಿ ಇತರ ಸಮುದಾಯವನ್ನು ಜತೆಗೆ ಕರೆದುಕೊಂಡು ಹೋಗಬೇಕು ಎಂದು ಸಚಿವರು ಹೇಳಿದರು.

(ವರದಿ: ಡಿ.ಎಲ್. ಹರೀಶ್)










Discussion about this post