ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಚಲಿಸುತ್ತಿರುವ ಬೈಕ್‌ಗೆ ನಾಯಿಗಳು ಅಡ್ಡ ಬಂದ ಪರಿಣಾಮ ಕೆಳಗಿ ಬಿದ್ದು ಅಸ್ವಸ್ಥರಾಗಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗುವ ಮೂಲಕ ಸಚಿವ ಬಿ.ಎ. ಬಸವರಾಜ್ Minister B A Basavaraj ಮಾನವೀಯತೆ ಮೆರೆದಿದ್ದಾರೆ.
ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ (ಬೈರತಿ) ಅವರು ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಬಗ್ಗೆ ಸಭೆ ನಡೆಸಿ, ಕಾರ್ಯ ನಿಮಿತ್ತ ಶಿವಮೊಗ್ಗ ಕಡೆಗೆ ಪ್ರಯಾಣ ಮಾಡುವಾಗ ಬೈಕ್‌ನಲ್ಲಿ ಬರುತ್ತಿದ್ದ ವ್ಯಕ್ತಿಗೆ ಅಕಸ್ಮಾತ್ತಾಗಿ ಎರಡು ನಾಯಿಗಳು ಅಡ್ಡ ಬಂದ ಪರಿಣಾಮ ಅದಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಅಸ್ವಸ್ಥರಾಗಿರುವುದನ್ನು ಗಮನಿಸಿ ಕಾರನ್ನು ನಿಲ್ಲಿಸಿ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲು ವಾಹನದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post