ದಾವಣಗೆರೆ: ಸಾಲ ಮಂಜೂರು ಮಾಡಲು ಮಂಚಕ್ಕೆ ಕರೆದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಖಾಸಗಿ ಮ್ಯಾನೇಜರ್‌ಗೆ ಹಿಗ್ಗಾ ಮುಗ್ಗಾ ಥಳಿಸಿ, ಸಾರ್ವಜನಿಕ ಸ್ಥಳದಲ್ಲೇ ಚಪ್ಪಲಿಯಲ್ಲಿ ಹೊಡೆದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಖಾಸಗಿ ಬ್ಯಾಂಕ್‌ವೊಂದರಲ್ಲಿ ಮಹಿಳೆಯೊಬ್ಬರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ನ ಮ್ಯಾನೇಜರ್ ದೇವಯ್ಯ ಸಾಲ ಮಂಜೂರು ಮಾಡಲು ಆಕೆಯನ್ನು ಮಂಚಕ್ಕೆ ಕರೆದಿದ್ದಾನೆ ಎಂದು ದೂರಲಾಗಿದೆ.
ಇದಕ್ಕಾಗಿ ಮ್ಯಾನೇಜರ್ ಆಕೆಯನ್ನು ತನ್ನ ಮನೆಗೆ ಕರೆದಿದ್ದಾನೆ. ಆಕೆ ಮ್ಯಾನೇಜರ್ ಮನೆಗೆ ತೆರಳಿದ್ದು, ಕೆಲವೇ ಕ್ಷಣಗಳಲ್ಲಿ ಆತನನ್ನು ಹೊರಕ್ಕೆ ಎಳೆದುಕೊಂಡು ಬಂದು ಹಿಗ್ಗಾಮುಗ್ಗಾ ಥಳಿಸಿದ್ದಾಳೆ.
ನಿಜಲಿಂಗಪ್ಪ ಲೇಔಟ್‌ನಲ್ಲಿ ಘಟನೆ ನಡೆದಿದ್ದು, ಮಹಿಳೆ ಆರೋಪಿಗೆ ಬಡಿಗೆ, ಚಪ್ಪಲಿಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾಳೆ.
ಸದ್ಯ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಮ್ಯಾನೇಜರ್‌ನನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಾಗಿದೆ.
ವೀಡಿಯೋ ನೋಡಿ:

















